ಉದಯವಾಹಿನಿ, ಚಿಕ್ಕಮಗಳೂರು: ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಲಾರಿ ಪಲ್ಟಿಯಾಗಿ ಭಾರೀ ಅನಾಹುತ ತಪ್ಪಿರುವ ಘಟನೆ ಕಳಸ ತಾಲೂಕಿನ ಬಾಳೆಹೊಳೆ ರಸ್ತೆಯ ಹಳುವಳ್ಳಿ ಯಡ್ರಗೋಡು ಗ್ರಾಮದ ಬಳಿ ನಡೆದಿದೆ. ಭದ್ರಾವತಿಯಿಂದ ಭರ್ತಿ ಎಲ್‌ಪಿಜಿ ಸಿಲಿಂಡರ್‌ಗಳನ್ನ ಹೊತ್ತ ಲಾರಿ ಕಳಸದಿಂದ ಬರುತ್ತಿತ್ತು. ಇಂದು ಬೆಳಗ್ಗಿನ ಜಾವ ೬:೩೦ರ ಸುಮಾರಿಗೆ ದಟ್ಟ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಲಾರಿ ಚಾಲಕ ಆನಂದ್‌ಗೆ ಗಂಭೀರ ಗಾಯವಾಗಿ ಕಳಸ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯಲ್ಲಿ ನೂರಕ್ಕೂ ಹೆಚ್ಚು ಭರ್ತಿ ಸಿಲಿಂಡರ್‌ಗಳು ಇದ್ದವು. ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗುತ್ತಿದ್ದಂತೆ ಸಿಲಿಂಡರ್‌ಗಳು ಹೊರಗಡೆ ಚೆಲ್ಲಾಪಿಲ್ಲಿಯಾಗಿದ್ದವು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. [ಅಪಘಾತ ಸಂಭವಿಸಿದ ಕೆಲವೇ ಸಮಯದಲ್ಲಿ ಕಳಸ ತಾಲೂಕಿನ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಮೋಹನ್ ಮತ್ತೊಂದು ವಾಹನ ತಂದು ಸಿಲಿಂಡರ್‌ಗಳನ್ನ ಬೇರೆಡೆ ಸಾಗಿಸಿದರು. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
