ಉದಯವಾಹಿನಿ, ಆನೇಕಲ್: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು. ಭಾರತೀಯ ಪರಂಪರೆ-ಸಂಸ್ಕೃತಿ-ಆಚರಣೆಗಳ ಬಗ್ಗೆ ಅರಿವು ಮೂಡಿಸಬೇಕು. ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಿರಂತರವಾಗಿ ನಡೆಸುವ ಮೂಲಕ ಮೌಲ್ಯ ಶಿಕ್ಷಣ ದೊರೆಯುವಂತೆ ಮಾಡಬೇಕು ಎಂದು ರಾಜಾಪುರ ಸಂಸ್ಥಾನ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.
ಅವರು ಅತ್ತಿಬೆಲೆ ಸಮೀಪದ ಮಂಚನಹಳ್ಳಿ ರಸ್ತೆಯಲ್ಲಿರುವ ರೈನ್‌ಬೋ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸದಲ್ಲಿ ಪಾಲ್ಗೊಂಡು ಮಾತನಾಡಿದರು.ನಟ ಶರಣ್ ಮಾತನಾಡಿ ಶಾಲೆಗಳು ದೇಗುಲಗಳಂತೆ. ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರಲು ಶಿಕ್ಷಣದಿಂದ ಮಾತ್ರ ಸಾಧ್ಯ. ಕಲಾವಿದರಾಗಿ ಬೆಳೆಯಬೇಕಾದರೆ ಶಾಲೆಗಳಲ್ಲಿ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಗಳಾಗುತ್ತವೆ. ಹಾಗಾಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಪ್ರತಿಶಾಲೆಗಳಲ್ಲಿಯೂ ನಡೆಸುವಂತಾಗಬೇಕು. ಸೇವಾ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಉತ್ತಮವಾದ ಉದ್ದೇಶದಿಂದ ಸತತ ಪ್ರಯತ್ನ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದರು.
ನಟಿ ಅಮೃತ ಪ್ರೇಮ್ ಮಾತನಾಡಿ ಪ್ರತಿಯೊಬ್ಬರು ವೈದ್ಯರಾಗಬೇಕು, ಇಂಜಿನಿಯರ್‌ಗಳಾಗಬೇಕು ಎಂಬ ಕನಸುಗಳನ್ನು ಹೊಂದಿರುತ್ತಾರೆ. ಆದರೆ ದೇಶಕ್ಕೆ ಅನ್ನ ನೀಡುವ ರೈತನಾಗಬೇಕು. ದೇಶ ಕಾಯುವ ಯೋಧನಾಗಬೇಕು ಎಂಬುದು ಯುವಕರ ಕನಸಾಗಬೇಕು ಎಂದರು.
ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹೊಸೂರು ಶಾಸಕ ಪ್ರಕಾಶ್, ಶಾಲೆಯ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವಿಜಯಕುಮಾರ್ ಗೌಡ, ಖಜಾಂಚಿ ಅಭಿಷೇಕ್, ಮುಖಂಡರಾದ ರಾಮೋಜಿಗೌಡ, ಸಂಪಗಿರಾಮಯ್ಯ, ಅಶ್ವಥಪ್ಪ, ಆನೇಕಲ್ ಹಂಸ ಒಕ್ಕೂಟದ ಅಧ್ಯಕ್ಷ ರವಿಕುಮಾರ್, ಕೆಂಪಟ್ಟಿ ಬ್ಲಾಕ್ ಅಧ್ಯಕ್ಷ ಕೆಂಪಯ್ಯ, ಗೆರಟಿಗನಬೆಲೆಯ ನಾಟಕ ಕಲಾವಿದ ರೇಣುಕಾರಾಧ್ಯ, ಶಾಲೆಯ ಮುರಳಿ, ಸದಾನಂದ್, ಶಿಕ್ಷಕರು, ವಿದ್ಯಾರ್ಥಿಗಳು ಬಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!