ಉದಯವಾಹಿನಿ, ಕೋಲಾರ: ಅಂಬಿಗರ ಚೌಡಯ್ಯ ಶೋಷಿತರ ಧ್ವನಿಯಾಗಿ ನೇರ, ನಿಷ್ಠೂರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಮಹಾನ್ ವಚನಕಾರ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಬಸವಣ್ಣರ ಹಾದಿಯಲ್ಲಿಯೇ ಕಾಯಕ ನಿಷ್ಠೆಯಿಂದ ಬಂದಿದ್ದಾರೆ, ಸಾಮಾಜಿಕವಾಗಿ ಬದಲಾವಣೆಯಾದರೆ ಮಾತ್ರವೇ ದೇಶದಲ್ಲಿ ರಾಮರಾಜ್ಯ ತರಲು ಸಾಧ್ಯವಾಗುತ್ತದೆ ಜಾತಿ ಅಭಿಮಾನ ಇರಲಿ, ದುರಾಭಿಮಾನ ಬೇಡ, ಇಂತಹ ಮಹಾತ್ಮರ ಜಯಂತಿ ಜಾತಿ ಆಧಾರದಲ್ಲಿ ತಾರತಮ್ಯ ಮಾಡದೇ ಎಲ್ಲಾ ವರ್ಗದವರು ಒಗ್ಗೂಡಿ ಆಚರಿಸಬೇಕು. ಜಿಲ್ಲಾ ಕಾಂಗ್ರೆಸ್ ಮೀನುಗಾರಿಕೆ ಘಟಕದ ಮಾಜಿ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಮೀನುಗಾರಿಕೆ ವಿಭಾಗದ ಅಧ್ಯಕ್ಷ ಕೆ.ರಂಗನಾಥ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಪತಿಯಪ್ಪ, ಮುಖಂಡರಾದ ಲಾಲ್ ಬಹಾದ್ದೂರ್ ಶಾಸ್ತ್ರಿ, ಅರಹಳ್ಳಿ ವಿಜಯಕುಮಾರ್, ಶ್ರೀನಿವಾಸ್, ನಾಗೇಶ್, ಮಿಲ್ಟ್ರಿ ರಾಮಣ್ಣ, ಜೋಗಮಾಲ್ ಇದ್ದರು.

Leave a Reply

Your email address will not be published. Required fields are marked *

error: Content is protected !!