
ಉದಯವಾಹಿನಿ,ಚಿಂಚೋಳಿ: ಪಟ್ಟಣದಲ್ಲಿ ನಿರ್ಮಿಸಿದ ಒಳ ಕ್ರೀಡಾಂಗಣಕ್ಕೆ 3ಕೋಟಿ ಹೊರ ಕ್ರೀಡಾಂಗಣಕ್ಕೆ 2ಕೋಟಿ ರೂ.ಅನುದಾನದಲ್ಲಿ ಈಗಾಗಲೇ ಕ್ರೀಡಾಪಟ್ಟುಗಳಿಗಾಗಿ ಕ್ರೀಡಾಂಗಣ ನಿರ್ಮಿಸಿದ್ದೇವೆ,ಇದರಿಂದ ತಾಲ್ಲೂಕಿನಾದ್ಯಂತ ಕ್ರೀಡಾಪಟ್ಟುಗಳಿಗೆ ಪ್ರತಿಭೆಗಳಿಗೆ ಗುರುತ್ತಿಸಲು ಅನುಕೂಲವಾಗುತ್ತಿದೆ ಎಂದು ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಹೇಳಿದರು. ತಾಲ್ಲೂಕಿನ ದೇಗಲಮಡಿ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯಲ್ಲಿ ಅವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ 2022-23ನೇ ಸಾಲಿನ ತಾಲ್ಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಉಧ್ಘಾಟಿಸಿ ಮಾತನಾಡಿದ ಅವರು ಕ್ರೀಡಾಪಟ್ಟುಗಳಿಗಾಗಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳು ಕಾರ್ಯಕ್ರಮಗಳು ರೂಪಿಸಿವೆ ಕ್ರೀಡಾ ಪ್ರತಿಭೆಗಳಿಗೆ ಶೇಕಡಾ 5 ಅಂಕಗಳು ನೀಡಲಾಗುತ್ತಿದೆ.ಭಾರತ ದೇಶ ಬದಲಾಗುತಿದೆ ದೇಶ ವಿಶ್ವಗುರುವಾಗುತ್ತಿದೆ,ಇಂದಿನ ಮಕ್ಕಳು ನಾಳೆನ ಭವಿಷ್ಯದ ತಾರೆಗಳು,ಮೊಬೈಲ್ ಬಂದನಂತರ ಅನೇಕರು ಸಮಯಕ್ಕೆ ಮಹತ್ವ ನೀಡುತ್ತಿಲ್ಲಾ ಸಮಯಕ್ಕೆ ಮಹತ್ವ ನೀಡುವುದು ಅವಶ್ಯಕವಾಗಿದೆ.ದೈಹಿಕ ಶಿಕ್ಷಕರು 50ಜನರಿದ್ದು ಒಳ್ಳೆಯ ಕ್ರೀಡಾ ಪ್ರತಿಭೆಗಳಿಗೆ ಗುರುತ್ತಿಸುವ ಕಾರ್ಯ ಮಾಡಬೇಕು.ಈಗಾಗಲೇ ತಾಲ್ಲೂಕಿನ ಕ್ರೀಡಾ ಪ್ರತಿಭೆಗಳಾದ ಕರಾಟೆ,ಗಾಯನ,ಪ್ರತಿಭಾ ಕಾರಂಜಿ,ಕಬ್ಬಡ್ಡಿ,ಚಕ್ಷ ಏಸೇತದ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಹೆಸರುವಾಸಿ ಆಗಿದ್ದಾರೆ ಎಂದರು.ಸ್ಥಳೀಯ ಶಾಸಕ ಡಾ.ಅವಿನಾಶ ಜಾಧವರವರು ಪಾರಿವಾಳವನ್ನು ಹಾರಿಸಿ ತಾಲ್ಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈಗಾಗಲೇ ತಾಲ್ಲೂಕಾ ಕ್ರೀಡಾಕೂಟ ದೇಗಲಮಡಿ ಗ್ರಾಮದ ಶಾಲೆಯಲ್ಲಿ ನಡೆಸಲು ಶಾಲೆಯ ಮೈದಾನ ದುರಸ್ತಿಗಾಗಿ 3ಲಕ್ಷ ಅನುದಾನದಲ್ಲಿ ಮಾಡಲಾಗಿದ್ದು,ಕಂಪೌಂಡ್ ನಿರ್ಮಿಸಲು 15ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಗಿದೆ.ಕಾಳಗಿಯಲ್ಲಿ ಕ್ರೀಡಾಂಗಣ ನಿರ್ಮಿಸಲು 50ಲಕ್ಷ ಅನುದಾನ ಮಿಸಲಿಟ್ಟಿದ್ದು ಸ್ಥಳ ದೊರಕದ ಕಾರಣ ಸಮಯವಾಗುತ್ತಿದೆ,ತುಮಕೂರು,ಮೈಸೂರು ಜಿಲ್ಲೆಗಳಂತೆ ನಮ್ಮ ತಾಲ್ಲೂಕಿನ ಕ್ರೀಡಾ ಪ್ರತಿಭೆಗಳು ಹೊರಬಂದು ತಾಲ್ಲೂಕಾ,ಜಿಲ್ಲಾ,ರಾಜ್ಯದ ಹೆಸರು ಎತ್ತರ ಮಟ್ಟಕ್ಕೆ ಕೊಂಡ್ಯಯಬೇಕು.ಕ್ರೀಡೆಯಿಂದ ಮಾನಸಿಕ ಶಕ್ತಿ ಹೆಚ್ಚುತ್ತದೆ,ರೋಗರುಜಿನಗಳಿಂದ ದೂರವಾಗುತ್ತೇವೆ,ಮನುಷ್ಯನಿಗೆ ಕ್ರೀಡೆ ಅವಶ್ಯಕವಾಗಿದೆ, ಕ್ರೀಡೆ ಜೋತೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಇಂದಿನ ವಿಧ್ಯಾರ್ಥಿಗಳು ಸಮಯ ಅವಕಾಶ ನೀಡಬೇಕು ಎಂದರು.ಗ್ರಾಪಂ ಅಧ್ಯಕ್ಷೆ ಶೋಭಾ ಸಂಗಪ್ಪ ಪಾಟೀಲ,ರಾಷ್ಟ್ರೀಯ ಸೇವಾದಳದ ಸಂಚಾಲಕ ಲಕ್ಷ್ಮಣ ಆವುಂಟಿ,ಇಓ ವೈ.ಎಲ್.ಹಂಪಣ್ಣ,ಟಿಹೆಚ್ಓ ಮಹ್ಮುದ್ ಗಫಾರ,ಬಿಓ ರಾಚಪ್ಪ ಭದ್ರಶೇಟ್ಟಿ ಮಾತನಾಡಿದರು.ಅಕ್ಷರ ದಾಸೋಹ ಅಧಿಕಾರಿ ಜಯಪ್ಪ ಚಾಪಲ್ ಸ್ವಾಗತಿಸಿದರು,ಕುಪೇಂದ್ರ ಮಾಸ್ಟರ್ ನಿರೂಪಿಸಿದರು, ತಾಲ್ಲೂಕಾ ಕ್ರೀಡಾ ಸಂಚಾಲಕ ಮಲ್ಲಿಕಾರ್ಜುನ ನೆಲ್ಲಿ ವಂದಿಸಿದರು.ಈ ಸಂದರ್ಭದಲ್ಲಿಡಿವೈಎಸ್ಪಿ ಬಸವರಾಜ ಕೆ,ಸಂತೋಷ ಗಡಂತಿ,ಸಂಗಪ್ಪ ಪಾಟೀಲ,ಶರಣು ಪಾಟೀಲ ಮುದ್ದಾ,ವೃತೇಂದ್ರರೆಡ್ಡಿ,ಶಾಮರಾವ,ಕಾಶಿರಾಮ,ಪಿಡಿಓ ಜ್ಯೋತಿ,ಗ್ರಾಪಂ ಅಪರೇಟರ್ ರಮೇಶ ದೇಗಲಮಡಿ,ರಾಕೇಶ ಗೂಸೂಲ್,ಪ್ರೇಮಸಿಂಗ್ ಜಾಧವ,ಉಮೇಶ ಪಾಟೀಲ,ಕೆಎಂ ಬಾರಿ,ಶ್ರೀಮಂತ ಕಟ್ಟಿಮನಿ,ವಿನೋಧ ಅವರಾಧಿ,ಗಣಪತರಾವ,ಶಿವಕುಮಾರ ಪೋಚಾಲಿ,ಅಮರ ಲೋಡನೂರ,ರಾಜು ಸೀಳಿನ,ವಿಲಾಸಪಾಟೀಲ,ರಾಜು ಪವರ,ಅಶೋಕ ಚವಾಣ,ಅವಿನಾಶ ಗೊಸೂಲ್,ಅನೇಕರಿದ್ದರು.ಅಥ್ಲೆಟಿಕ್ಸ್,ಖೋಖೋ,ವಾಲಿಬಾಲ್,ಕಬಡ್ಡಿ,ಕ್ರೀಡಾಕೂಟದಲ್ಲಿ ನಾನಾ ಶಾಲೆಗಳ ಕ್ರೀಡಾಪಟುಗಳು,ಗ್ರಾಮಸ್ಥರು ಭಾಗವಹಿಸಿದ್ದರು.
