
ಉದಯವಾಹಿನಿ,ತಾಳಿಕೋಟಿ: ಸಮಾಜದಲ್ಲಿರುವ ಕಡು ಬಡವ ಹಾಗೂ ದುರ್ಬಲರಿಗೆ ಆರೋಗ್ಯ ಸೇವೆಗಳು ಸರಳವಾಗಿ ಸಿಗದೇ ಇರುವುದರಿಂದ ಅವರು ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಅನಕೂಲ ಮಾಡಿಕೊಡಲು ಇಂಥಹ ಉಚಿತ ಆರೋಗ್ಯ ಶಿಬಿರಗಳನ್ನು ನಮ್ಮ ಫೌಂಡೇಶನ್ ಹಮ್ಮಿಕೊಳ್ಳುತ್ತಿದೆ ಎಂದು ದೇವಿಕಾ ಸುಬ್ಬರಾವ್ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ನಾಡಗೌಡ ತಿಳಿಸಿದರು.ಪಟ್ಟಣದ ಎಸ್.ಕೆ. ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ದೇವಿಕಾ ಸುಬ್ಬರಾವ ಫೌಂಡೇಶನ್ ಮುದ್ದೇಬಿಹಾಳ ಹಾಗೂ ವೀರಶೈವ ವಿದ್ಯಾವರ್ಧಕ ಸಂಘ ತಾಳಿಕೋಟಿ, ಇವರ ನೇತೃತ್ವದಲ್ಲಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಶಿಬಿರದಲ್ಲಿ ಸುಮಾರು ೧೩೫೦ ಜನ ರೋಗಿಗಳ ತಪಾಸಣೆ ನಡೆಯಿತು. ಇದರಲ್ಲಿ ಹೃದಯರೋಗದ ೨೫೦, ನರರೋಗದ ೧೫೦, ಕ್ಯಾನ್ಸರ್‌ಗೆ ಸಂಬAಧಿಸಿದ ೧೫ ರೋಗಿಗಳು, ಹಾಗೂ ಸುಮಾರು ೩೨೦ ಜನರು ಕಣ್ಣಿನ ತಪಾಸಣೆಗೆ ಒಳಪಟ್ಟರು. ೧೬೨ ರೋಗಿಗಳನ್ನು ಹೆಚ್ಚಿನ ಚಿಕತ್ಸೆಗಾಗಿ ಆಯ್ಕೆ ಮಾಡಲಾಯಿತು. ಇವರೆಲ್ಲರಿಗೂ ಉಚಿತವಾದ ಚಿಕಿತ್ಸೆ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರದಲ್ಲಿ ನೀಡಲಾಗುವುದು.
ಈ ಸಂದರ್ಭದಲ್ಲಿ ವೇ.ಮೂ. ಮುರುಗೇಶ ವಿರಕ್ತಮಠ, ಮುಸ್ಲೀಂ ಧರ್ಮಗುರು ಸೈಯದ ಶಕೀಲಅಹ್ಮದ ಖಾಜಿ, ಮಾಜಿ ಸಚಿವ ಸಿ ಎಸ್ ನಾಡಗೌಡ(ಅಪ್ಪಾಜಿ), ಬಿ ಎಸ್ ಗಬಸಾವಳಗಿ, ಬಿ ಎಸ್ ಪಾಟೀಲ(ಯಾಳಗಿ), ಡಾ. ಪ್ರಭುಗೌಡ ಲಿಂಗದಳ್ಳಿ, ಆನಂದಗೌಡ ದೊಡಮನಿ, ಡಾ. ನಂದಕುಮಾರ ಭೈರಿ, ಡಾ. ರವಿ, ಡಾ. ದಿವ್ಯಾ, ಡಾ. ನರೇಂದ್ರ, ಸಿದ್ದನಗೌಡ ಪಾಟೀಲ(ನಾವದಗಿ), ವಿ ಸಿ ಹಿರೇಮಠ, ಎಸ್ ಬಿ ಕಟ್ಟಿಮನಿ, ರಾಹುಲ ನಾಡಗೌಡ, ಚಿನ್ನು ಧಣಿ(ಬಸರಕೋಡ), ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್ ಕೆ ಚೋರಗಸ್ತಿ, ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಮಾಸೂಮಸಾಬ ಕೆಂಭಾವಿ, ಇದ್ದರು.
