ಉದಯವಾಹಿನಿ, ಆನೇಕಲ್: ಸಮಾನತೆಗಾಗಿ ತಮ್ಮ ಜೀವನವನ್ನೇ ಸವೆಸಿ ಇಡೀ ದೇಶದ ಶೋಷಿತ ಸಮುದಾಯಗಳಿಗೆ ಬದುಕುವ ಹಕ್ಕನ್ನು ಕೊಟ್ಟ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಅಪಮಾನ ಮಾಡಿದವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ರಾಜ್ಯಾಧ್ಯಕ್ಷ ಡಾ. ಎಂ.ಮರಸೂರು ಕೃಷ್ಣಪ್ಪ ಸರ್ಕಾರಕ್ಕೆ ಆಗ್ರಹಿಸಿದರು.
ಅವರು ಕಲಬುರ್ಗಿಯ ಕೋಟನೂರುನಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಆನೇಕಲ್ ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕತ್ತಲೆಯಲ್ಲಿರುವ ಜನರಿಗೆ ಬೆಳಕನ್ನು ಕೊಡಿಸಿದ್ದು ಅಂಬೇಡ್ಕರ್, ದೇಶದ ಎಲ್ಲಾ ಜಾತಿಯ ವರ್ಗದವರಿಗೆ ಸಮಾನತೆಯ ಸಂವಿಧಾನ ಕೊಟ್ಟಿದ್ದು ಅಂಬೇಡ್ಕರ್, ಮಹಿಳೆಯರಿಗೂ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಸಮಾನತೆ, ಸಹಬಾಳ್ವೆಯಿಂದ ಬದುಕುವ ಹಕ್ಕನ್ನು ಕೊಟ್ಟಿದ್ದು ಅಂಬೇಡ್ಕರ್, ಆದರೆ ಅಂತಹ ಮಹಾತ್ಮನ ಪುತ್ಥಳಿಯನ್ನು ಅಪಮಾನ ಮಾಡುವ ಕಿಡಿಗೇಡಿಗಳನ್ನು ಕೂಡಲೇ ಬಂದಿಸಿ ಜೈಲಿಗೆ ಹಟ್ಟುವ ಕೆಲಸವನ್ನು ಮಾಡಬೇಕು ಎಂದರು ಸರ್ಕಾರಕ್ಕೆ ಎಚ್ಚರಿದರು.
ಇಷ್ಠೆಲ್ಲಾ ಅನಾಹುತ ಆದರೂ ಸಹ ಅಂಬೇಡ್ಕರ್ ರವರು ಕೊಟ್ಟಂತಹ ಬಿಕ್ಷೆಯಿಂದ ಅದಿಕಾರವನ್ನು ಅನುಭವಿಸುತ್ತಿರುವ ಕಲುಬುರ್ಗಿ ಬಾಗದ ದಲಿತ ಸಮುದಾಯದ ಜನಪ್ರತಿನಿಧಿ ಏಕೆ ಸುಮ್ಮನಿದ್ದೀರಾ, ತಮ್ಮ ಕೈಯಲ್ಲಿ ಕೃತ್ಯವನ್ನು ಖಂಡಿಸಲು ಸಾಧ್ಯವಾಗದೇ ಇದ್ದರೆ ಕೂಡಲೇ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದರು. ರಾಜ್ಯದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆ. ಗೃಹ ಸಚಿವರು ಏಕೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಕೂಡಲೇ ರಾಜ್ಯ ಸರ್ಕಾರ ತಪ್ಪಿತಸ್ತರನ್ನು ಬಂದಿಸಬೇಕು ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಆಗದ ರೀತಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲವಾದಲ್ಲಿ ರಾಜ್ಯದಲ್ಲಿರುವ ಎಲ್ಲಾ ದಲಿತ ಪರ, ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!