
ಪಿರಿಯಾಪಟ್ಟಣ: ಎಲ್ಲಾ ಖರ್ಚುಗಳನ್ನು ಕಳೆದು 1.39 ಲಕ್ಷ ರೂ ನೀವುಗಳ ಲಾಭ ಹೊಂದಿರುವುದಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಶರಥ ರಾಜೇ ಅರಸ್ ತಿಳಿಸಿದರು.ತಾಲೂಕಿನ ಸೀಗೂರು ಗ್ರಾಮದಲ್ಲಿ ಶನಿವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ 2021- 22 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಹೆಚ್ಚು ಹಸುಗಳನ್ನು ಸಾಕೋದರ ಮೂಲಕ ಹೆಚ್ಚು ಹಾಲನ್ನು ಉತ್ಪಾದಿಸಿ ಹೆಚ್ಚು ಆರ್ಥಿಕ ಲಾಭವನ್ನು ಪಡೆಯಬೇಕೆಂದು ತಿಳಿಸಿದರು.ನಿರ್ದೇಶಕ ಸೀಗೂರು ವಿಜಯ ಕುಮಾರ್ ಮಾತನಾಡಿ ರಾಷ್ಟ್ರೀಯ ಕೃತ ಬ್ಯಾಂಕಿನಲ್ಲಿ ಹಾಲು ಉತ್ಪಾದಕರು ಖಾತೆಗಳನ್ನು ತೆರೆದು ಸಾಲ ಸೌಲಭ್ಯವನ್ನು ಪಡೆದು ಕೊಳ್ಳವ ಬಗ್ಗೆ ಸಲಹೆ ನೀಡಿದರು.ಮೈ.ಜಿ.ಸ.ಹಾ. ಒಕ್ಕೂಟ. ಮೈಸೂರು ವಿಸ್ತರಣಾಧಿಕಾರಿಗಳಾದ ಸತೀಶ್ ಮಾತನಾಡಿ ಒಕ್ಕೂಟದಲ್ಲಿ ಸಹಕಾರ ಸಂಘ ಮತ್ತು ಹಾಲು ಉತ್ಪಾದಕರಿಗೆ ಇರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.ಉಪಾಧ್ಯಕ್ಷ ಪುಟ್ಟಸ್ವಾಮಿಯ. ನಿರ್ದೇಶಕರಾದ ಅಣ್ಣೇಗೌಡ. ಕಾಂತರಾಜ್. ತಿಮ್ಮಪ್ಪ. ನಾಗೇಗೌಡ. ಆನಂದ್. ಶಶಿ. ಗಾಯಿತ್ರಮ್ಮ. ತಮ್ಮ ಬೋವಿ. ಎಸ್ ಬಿ ರಾಜಶೆಟ್ಟಿ. ಕಾರ್ಯದರ್ಶಿ ಎಸ್ ಪಿ ರವಿ. ಹಾಲು ಪರಿವೀಕ್ಷಕ ಕೃಷ್ಣ ಸೇರಿದಂತೆ ಇತರರಿದ್ದರು.
