
ಉದಯವಾಹಿನಿ ಸಿಂಧನೂರು :ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತರಾಮನ್ ಇವರು ಮಂಡಿಸಿದ 2024- ಮಧ್ಯಂತರ ಬಜೆಟ್ , ಜನ ವಿರೋಧಿ ಯಾಗಿದೆ.ಹಸುವಿನ ಸೂಚ್ಯಂಕದಲ್ಲಿ ಭಾರತ 107 ನೆ ಸ್ಥಾನದಲಿದೆ CPML RI ರಾಜ್ಯ ಸಮಿತಿಯ ಕಾರ್ಯದರ್ಶಿ ಡಿ. ಎಚ್. ಪೂಜಾರಿ ಕೇಂದ್ರ ಸರ್ಕಾರ ಬಜೆಟ್ ಘೋಷಿಸಿದ್ದ ಸುಳ್ಳಿನ ಬಜೆಟ್ ಯಾಗಿದ್ದು ಆರೋಪಿಸಿದರು. ಸರ್ಕಾರದ ನೀತಿ ಆಯೋಗ 10 ವರ್ಷಗಳಲ್ಲಿ 25 ರಷ್ಟು ಬಡತನ ಕಡಿಮೆ ಯಾಗಿದೆ ಎಂದು ಸುಳ್ಳಿನಿಂದ ಕೂಡಿದ ವರದಿ ಕೊಟ್ಟಿದೆ. ಈ ಸುಳ್ಳನ್ನೆ ಹಣಕಾಸು ಮಂತ್ರಿಗಳು ಬಜೆಟ ನಲ್ಲಿ ಓದಿದ್ದಾರೆ. ಕಾರ್ಪೋರೇಟ ಕಂಪನಿಗಳಿಗೆ ತೆರಿಗೆ ಹೆಚ್ಚು ಮಾಡದೆ ಹಳೆಯ ತೆರಿಗೆಯನ್ನು ಮುಂದುವರಿಸಿ, ಸಾಮನ್ಯ ಜನರಿಗೆ ದ್ರೋಹ ಮಾಡಿದೆ.ಜನರ ತರಿಗೆ ಹಣದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಭೂಮಿ, ನೀರು, ರಸ್ತೆ ವಿದ್ಯುತ್ತ ಇತರೆ ಮೂಲ ಭೂತ ಸೌಲಭ್ಯಗ ಳನ್ನು ಕೊಡುತ್ತಿರುವುದು ಖಂಡನೀಯ.
ಆರ್ಥಿಕ ಮುಗ್ಗಟ್ಟಿನಲ್ಲಿರುವ ಕೇಂದ್ರ ಸರ್ಕಾರ ರೈತರಿಗೆ, ಕಾರ್ಮಿಕರಿಗೆ ಬಡವರಿಗೆ ಯಾವ ವಿಷೇಶ ಯೋಜನೆಗನ್ನು ಘೋಷಿಸಿಲ್ಲ. ತೀವ್ರ ಬರಗಾಲವನ್ನು ಎದುರಿಸುತ್ತಿರುವ ಜನರಿಗೆ ವಿಷೇಶ ಕೊಡುಗೆ ನೀಡಬಹುದೆಂದು ನಿರೀಕ್ಷಿಸಲಾಗಿತ್ತು.ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ. ಸಾಮನ್ಯ ಜನರ ಸಮಸ್ಯೆಗಳನ್ನು ಗಂಭೀರವಾಗಿಪರಿಗಣಿಸದೆ ಜನರ ಹೊಟ್ಟೆಯ ಮೇಲೆ ಹೊಡೆದಿದೆ. ಕಳೆದ ವರ್ಷದ ಬಜೆಟನಲ್ಲಿ ಭದ್ರಾ ನೀರಾವರಿ ಯೋಜನೆಗೆ 5300 ಘೋಷಣೆ ಮಾಡಲಾಗಿತ್ತು, ಈ ಕುರಿತು ಯಾವ ಪ್ರಸ್ತಾಪವಿಲ್ಲ.ರಾಜ್ಯದಿಂದ ಪ್ರತಿ ವರ್ಷ 4 ಲಕ್ಷ ಕೋಟಿ GST ಇತರೆ ತರಿಗೆ ಹಣ ಪಡೆಯುವ ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಮಾಡಿದೆ.
ಸುಳ್ಳಿನಿಂದ ಕೂಡಿದ ಈ ಬಜೆಟ ನ್ನು ವಿರೋಧಿಸಿ ಹೋರಾಡಬೇಕೆಂದು CPIML RI ರಾಜ್ಯ ಸಮಿತಿ ಜನತೆ ಕರೆ ಕೊಡುತ್ತದೆ. ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ: ಬಸವರಾಜ ಯರದಿಹಾಳ ಜಿಲ್ಲಾ ಕಾರ್ಯದರ್ಶಿ ರಾಯಚೂರು ಇದ್ದರು.
