
ಉದಯವಾಹಿನಿ ಮಸ್ಕಿ: ಪಟ್ಟಣದ ಬಸವೇಶ್ವರ ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ವಚನಕಾರರು ಶರಣ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಮಾಡಲಾಯಿತು.
ಮಾಚಿದೇವರ ಭಾವಚಿತ್ರಕ್ಕೆ ಗುರುವಾರ ಬೆಳಿಗ್ಗೆ ಹೂವಿನಹಾರ ಅರ್ಪಿಸಿ, ಕಾಯಿ ಕರ್ಫೂರ ಅರ್ಪಿಸಲಾಯಿತು. ಈ ವೇಳೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ಅವರು ಮಾತನಾಡಿ, 12 ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಹೋರಾಡಿದ ಮಹಾನ ಚೇತನರು, ಅಷ್ಟೇ ಅಲ್ಲದೇ ವಚನಸಾಹಿತ್ಯವನ್ನು ರಕ್ಷಣೆ ಮಾಡಿದ ಮಹಾರಕ್ಷಕರು ಆಗಿದ್ದರು ಎದು
ಹೇಳಿದರು. ಹಾಗೂ ತಾಲೂಕ ಆಡಳಿತ ವತಿಯಿಂದ ತಹಶೀಲ್ದಾರ ಕಚೇರಿಯಲ್ಲಿ ಕಂದಾಯ ಇಲಾಖೆ ಸಿಬ್ಬಂಸಿ ವರ್ಗದವರು ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ, ಮಸ್ಕಿ ಶಕ್ತಿ ಕೇಂದ್ರ ಅಧ್ಯಕ್ಷ ನಾಗರಾಜ ಯoಬಲದ, ಮೌನೇಶ ನಾಯಕ, ಮಡಿವಾಳ ಸಮಾಜದ ಅಧ್ಯಕ್ಷ ದೇವರಾಜ ಸಮಾಜದ ಮುಖಂಡ ಈರಣ್ಣ ಮಡಿವಾಳ, ವಿಶ್ವನಾಥ ಮಡಿವಾಳ, ಮಲ್ಲಿಕಾರ್ಜುನ ಮಡಿವಾಳ, ನಾಗರಾಜ ಮಡಿವಾಳ ಹೂವಿನಭಾವಿ, ಬಸವರಾಜ ಮಡಿವಾಳ, ಮಲ್ಲಯ್ಯ ಮಡಿವಾಳ ಸೇರಿದಂತೆ ಇನ್ನಿತರರು ಉಪಸ್ಥಿತಿರಿದ್ದರು.
