ಉದಯವಾಹಿನಿ,ಚಿಂಚೋಳಿ : ರಾಜ್ಯ ಸರ್ಕಾರವು 5ಗ್ಯಾರಂಟಿಗಳು ಘೋಷಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು. ಪಟ್ಟಣದ ಪುರಸಭೆ ಅವರಣದಲ್ಲಿ ತಾಲ್ಲೂಕಾಡಳಿತ ಹಾಗೂ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರ ಘೋಷಿಸಿದ 5ಗ್ಯಾರಂಟಿಯ ಯೋಜನೆಗಳ ಬಗ್ಗೆ ಜಾಗೃತಿ ಸಮಾವೇಶವನ್ನು ಉಧ್ಘಾಟಿಸಿ ಮಾತನಾಡಿದ ಅವರು,ಗೃಹಜ್ಯೋತಿ,ಅನ್ನಭಾಗ್ಯ,ಲಕ್ಷ್ಮಿ ಯೋಜನೆ,ಗೃಹಲಕ್ಷ್ಮಿ,ಯುವನಿಧಿ ಐದು ಗ್ಯಾರಂಟಿಗಳು ಸರ್ಕಾರ ಘೋಷಣೆ ಮಾಡಿದ್ದಾರೆ.
ಸರ್ಕಾರದ ಯೋಜನೆಗಳು ಸಾರ್ವಜನಿಕರು ಮಹಿಳೆಯರು ಯುವಕರು ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗ ಪಡಿಸಿಕೊಂಡು ಗಾಂಧೀಜಿ ಆಶೆಯದಂತೆ ದೇಶದಲ್ಲಿ ಯಾರು ಹಸಿವಿನಿಂದ ನರಳಬಾರದೆಂದು ಅನ್ನಭಾಗ್ಯ ಯೋಜನೆ,ಹಾಗೂ ಮಹಿಳೆಯರು ನಿರ್ಭಯವಾಗಿ ಓಡಾಟ ಮಾಡಬೇಕೆಂದು ಲಕ್ಷ್ಮಿ ಯೋಜನೆ ಉಚಿತ ಬಸ್ ಪ್ರಯಾಣ,ಸ್ವಾಲಂಬಿ ಜೀವನ ಸಾಧಿಸಲು ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳ 2ಸಾವಿರ ರೂಪಾಯಿ ಯೋಜನೆ,ಕುಟುಂಬಕ್ಕೆ ಹೊರೆಯಾಗದಂತೆ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ,ಶಿಕ್ಷಣ ಪಡೆದು ನಿರೋಧ್ಯೋಗ ಡಿಫ್ಲೋಮೊ ಮತ್ತು ಡಿಗ್ರಿ ಪಡೆದ ಯುವಕರಿಗೆ ಪ್ರತಿ ತಿಂಗಳು 1500ಮತ್ತು 3000ರೂಪಾಯಿ ಯೋಜನೆ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದರು. ತಾಪಂ.ಇಓ ಶಂಕರ ರಾಠೋಡ ಮಾತನಾಡಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳು ಸಮರ್ಪಕವಾಗಿ ಬಳಕೆ ಆಗುತ್ತಿರುವ ಕುರಿತು ಹಾಗೂ ಸಾಧಕ ಭಾದಕಗಳು ಸರಿಪಡಿಸಿ ವರದಿ ನೀಡುವಂತೆ ಸರ್ಕಾರದ ಆದೇಶದ ಮಾಡಿದ್ದ ಕಾರಣ ಆದೇಶ ಮೇರೆಗೆ ಸಮಾವೇಶ ನಡೆಸಿ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ವಂಚಿತರಾದವರಿಗೆ ಯೋಜನೆ ಉಪಯೋಗ ಪಡೆಯಲು ಮಳಿಗೆಗಳು ನಿರ್ಮಿಸಿದ್ದು ವಂಚಿತ ಫಲಾನುಭವಿಗಳು ಸೂಕ್ತ ದಾಖಲೆ ನೀಡಿ ಯೋಜನೆಯ ಸದುಪಯೋಗ ಪಡೆದುಕೋಳ್ಳಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸ್ವಾಗತಿಸಿದರು,ಪ್ರಾಚಾರ್ಯ ಮಲ್ಲಿಕಾರ್ಜುನ ಪಾಲಾಮೂರ್ ನಿರೂಪಿಸಿದರು,ಪರಿಸರ ಅಭಿಯಂತರರು ಸಂಗಮೇಶ ಪಡಶೇಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ಗ್ರೇಡ್2ತಹಸೀಲ್ದಾರ್ ವೆಂಕಟೇಶ ದುಗ್ಗನ್,ಸಿಡಿಪಿಓ ಗುರುಪ್ರಸಾದ ಕವಿತಾಳ,ಜೇಸ್ಕಾಂ ಎಇಇ ಸುರೇಶ ಬಾಬು,ಸಾರಿಗೆ ವ್ಯವಸ್ಥಾಪಕ ವಿಠ್ಠಲ,ನಿಂಗಮ್ಮ ಬಿರಾದಾರ,ಸುಭಾಷ್ ನಿಡಗುಂದಿ,ರವಿಪಾಟೀಲ,ದೇವೀಂದ್ರಪ್ಪ ಕೋರವಾರ,ಬಸವರಾಜ ಮಾಲಿ,ಚಿಂತನ ಸುಭಾಷ್ ರಾಠೋಡ,ಶಬ್ಬೀರ ಅಹೇಮದ,ನಾಗೇಂದ್ರಪ್ಪಾ,ಅನ್ವರ ಖತೀಬ್,ಬಸವರಾಜ ಸಿರ್ಸಿ,ಸಂತೋಷ,ಖಲೀಲ್ ಪಟೇದ,ನರಸಮ್ಮಾ ಲಕ್ಷ್ಮಣ ಆವುಂಟಿ,ನಾಗೇಶ ಗುಣಾಜೀ,ಸವಿತಾ,ಆನಂದ ಕಾಂಬ್ಳೆ,ಶರಣಪ್ಪ,ಅನೇಕರಿದ್ದರು.
ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಸದುಪಯೋಗ ಪಡೆದ ಫಲಾನುಭವಿಗಳು ವಿವರ
1) ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ ತಾಲ್ಲೂಕಿನಲ್ಲಿ 41,2,63 ಫಲಾನುಭವಿಗಳು ಸದುಪಯೋಗ,2) ಲಕ್ಷ್ಮಿ ಯೋಜನೆ ಉಚಿತ ಬಸ್ ಪ್ರಯಾಣ ಜೂನ್ 1ರಿಂದ ಇಲ್ಲಿಯವರೆಗೆ 7,2,101ಮಕ್ಕಳು ಸೇರಿದಂತೆ 22.28ಲಕ್ಷ ಜನರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ,3) ಗೃಹಲಕ್ಷ್ಮಿ ಪ್ರತಿ ತಿಂಗಳಿಗೆ 2ಸಾವಿರ ರೂಪಾಯಿಯು 48ಸಾವಿರ ಜನರಿಗೆ ತಲುಪಿದ್ದು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ,4) ಅನ್ನಭಾಗ್ಯ ಉಚಿತ ರಾಷನ್ ಯೋಜನೆ 48,850ಜನರು ಸದುಪಯೋಗ ಪಡೆದುಕೊಳ್ಳುತಿದ್ದಾರೆ,5) ಯುವನಿಧಿ ಯೋಜನೆಯಿಂದ ಈಗಾಗಲೇ 389ಜನರು ಅರ್ಜಿ ಹಾಕಿ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!