ಉದಯವಾಹಿನಿ, ಹಂಪಿ : ಇದೇ ಮೊದಲ ಬಾರಿಗೆ ಹಂಪಿ ಉತ್ಸವದಲ್ಲಿ ಆಯೋಜಿಸಲಾದ ಎತ್ತುಗಳ ಪ್ರದಶನ ಜನಮನ ಸೂರೆಗೊಂಡಿದೆ. ರೈತರ ಸಂಗಾತಿ, ಉಳುಮೆ ಸಹಕಾರಿಯಾಗಿರುವ ವಿವಿಧ ದೇಶಿ ತಳಿಯ ಎತ್ತುಗಳು ಪ್ರದರ್ಶನದ ಆಕರ್ಷಣೆ ಎನಿಸಿದವು.

ಕಮಲಾಪುರ ಪಟ್ಟಣದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಹಿಂಭಾಗದ ಆವರಣದಲ್ಲಿ ಇಂದು ನಡೆದ ಎತ್ತುಗಳ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಗೋ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
52 ಜೊತೆ ಎತ್ತುಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಹಳ್ಳಿಕಾರ್, ಅಮೃತ್ ಮಹಲ್, ಕಿಲಾರ್ ಸೇರಿದಂತೆ ಹಲವು ದೇಶಿ ತಳಿಯ ಎತ್ತುಗಳು ರೈತರ ಮನಗೆದ್ದವು. ಹೊಸಪೇಟೆ ನಗರದ ಬಂಡಿ ಕೃಷ್ಣಪ್ಪ ಅವರ ಜೋಡೆತ್ತುಗಳು ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಗೆ ಭಾಜನವಾಗಿ ಮೊದಲ ಸ್ಥಾನಗಳಿಸಿದವು. ಹೊಸಪೇಟೆ ತಾಲ್ಲೂಕಿನ ನಲ್ಲಾಪುರ ಗ್ರಾಮದ ರೈತ ಹನುಮಂತಪ್ಪ ಮುದಿಯಪ್ಪನವರ ಜೋಡೆತ್ತುಗಳು ದ್ವಿತೀಯ ಸ್ಥಾನಗಳಿಸಿದರೆ, ವೆಂಕಟಾಪುರ ಗ್ರಾಮದ ರೈತ ಹುಲಿಗೇಶ್ ಅವರ ಜೋಡೆತ್ತುಗಳು ಮೂರನೇ ಸ್ಥಾನಗಳಿಸಿದವು.
ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಗೆ ಭಾಜನವಾದ ಜೋಡೆತ್ತುಗಳಿಗೆ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ವೈಯಕ್ತಿಕವಾಗಿ ರೂ.50 ಸಾವಿರ ಬಹುಮಾನ ನೀಡಿದ್ದು, ವಿಶೇಷವಾಗಿತ್ತು.

Leave a Reply

Your email address will not be published. Required fields are marked *

error: Content is protected !!