ಉದಯವಾಹಿನಿ, ಶಿಡ್ಲಘಟ್ಟ: ಚಿಕ್ಕಬಳ್ಳಾಪುರದ ಬಿಜಿಎಸ್ ವರ್ಲ್ಡ್ ಸ್ಕೂಲ್ ನಲ್ಲಿ ಇಂಟರ್ ಸ್ಕೂಲ್ ಸ್ಕೇಟಿಂಗ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು ಪಂದ್ಯಾವಳಿಯಲ್ಲಿ ಶಿಡ್ಲಘಟ್ಟದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಅಡಿಯಲ್ಲಿ ವಿದ್ಯಾಭ್ಯಾಸ ಪಡೆದ ಮಕ್ಕಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ತಾಲ್ಲೂಕಿಗೆ ಕೀರ್ತಿ ತಂದುಕೊಟ್ಟಿದ್ದಾರೆ.
ಪಂದ್ಯಾವಳಿಯಲ್ಲಿ ೦೬ ವರ್ಷದ ಕ್ವಾಡ್ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಹಿಮದ್ರಿಶ್ ರಾಮ್, ರಿಂಕ್ ರೇಸ್ ತೃತೀಯ ಸ್ಥಾನ ಹಾಗೂ ರೋಡ್ ರೇಸ್ ದ್ವಿತೀಯ ಸ್ಥಾನ ನಿರಂಜನ್, ೦೮ ವರ್ಷದ ಕ್ವಾಡ್ ಸ್ಕೇಟಿಂಗ್ ರಿಂಕ್ ರೇಸ್ ಪ್ರಥಮ ಸ್ಥಾನ ರೋಡ್ ರೇಸ್ ಪ್ರಥಮ ಸ್ಥಾನ ರಿತ್ವಿಕ್, ಟೆನ ಸಿಟಿ ಸ್ಕೇಟಿಂಗ್ ರಿಂಕ್ ಪ್ರಥಮ ಸ್ಥಾನ ಹಾಗೂ ರೋಡರಸ್ ಪ್ರಥಮ ಸ್ಥಾನ ೦೯ ವರ್ಷದ ಡೆನಸಿಟಿ ಸ್ಕೇಟಿಂಗ್ ನಲ್ಲಿ ಪುನೀತ್ ಸೂರ್ಯ, ರಿಂಕ್ ರೇಸ್ ಪ್ರಥಮ ರೋಡ್ ರೇಸ್ ಪ್ರಥಮ ಮಿಥುನ್ ರಾಜ್, ೧೧ ವರ್ಷದ ರಿಂಕ್ ರೇಸ್ ದ್ವಿತೀಯ ಸ್ಥಾನ ಹಾಗೂ ರೋಡ ರೇಸ್ ಪ್ರಥಮ ಸ್ಥಾನ ಅಖಿಲೇಶ್, ೧೧ ವರ್ಷದ ಇನ್ ಲೈನ್ ಸ್ಕೇಟಿಂಗ್ ರಿಂಕ್ ರೇಸ್ ದ್ವಿತೀಯ ಸ್ಥಾನ ರೋಡ್ ರೇಸ್ ಪ್ರಥಮ ಸ್ಥಾನ ಸಾನ್ವಿತ, ೦೭ ವರ್ಷದ ಟೆನಸಿಟಿ ಸ್ಕೇಟಿಂಗ್ ರಿಂಕ್ ರೇಸ್ ಪ್ರಥಮ ಸ್ಥಾನ ರೋಡ್ ರೇಸ್ ಪ್ರಥಮ ಸ್ಥಾನ. ವರುಣಶ್ರೀ, ೧೧ ವರ್ಷದ ಕ್ವಾಡ್ ಸ್ಕೇಟಿಂಗ್ ರಿಂಕ್ ರೇಸ್ ದ್ವಿತೀಯ ಸ್ಥಾನ ಹಾಗೂ ರೋಡ್ ರೈಸ್ ದ್ವಿತೀಯ ಸ್ಥಾನ ತನ್ಮಯಿ ಬಿ.ಎಸ್, ೧೧ ವರ್ಷದ ಕ್ವಾಡ್ ಸ್ಕೇಟಿಂಗ್ ರಿಂಕ್ ರೇಸ್ ತೃತೀಯ ಸ್ಥಾನ ಹಾಗೂ ರೋಡ್ ರೇಸ್ ತೃತಿಯ ಸ್ಥಾನವನ್ನು ಪಡೆದುಕೊಂಡು ಪ್ರಶಸ್ತಿ ಮತ್ತು ಪ್ರಶಂಸನಾ ಪತ್ರ ಪಡೆದುಕೊಂಡಿದ್ದಾರೆ.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಸ್ಕೇಟಿಂಗ್ ಶಿಕ್ಷಕ ಅರುಣ್ ಕುಮಾರ್ ಮತ್ತು ಪೋಷಕರು ಹಾಜರಿದ್ದರು.
