ಉದಯವಾಹಿನಿ, ಆನೇಕಲ್: ಸಂವಿದಾನ ದಿನಾಚಣೆಯ ಪ್ರಯುಕ್ತವಾಗಿ ಸಂವಿಧಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥವನ್ನು ಹಮ್ಮಿಕೊಂಡಿದ್ದು ಇಂದು ಜಿಗಣಿ ಪುರಸಭೆ ವ್ಯಾಪ್ತಿಗೆ ಸಂವಿಧಾನ ಜಾಗೃತಿ ಜಾಥ ರಥವು ಆಗಮಿಸುತ್ತಿದ್ದಂತೆ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಮುಖಂಡರುಗಳು.ಸಾರ್ವಜನಿಕರು ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಹಲವು ಕಲಾ ತಂಡಗಳೋಂದಿಗೆ ಸಂವಿಧಾನ ಜಾಗೃತಿ ಜಾಥ ರಥವು ಜಿಗಣಿ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು,
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಲಷ್ಮಣ್ ರೆಡ್ಡಿ, ಸಹಾಯಕ ನಿರ್ದೆಶಕರಾದ ಮಂಜುನಾಥ್, ಪುರಸಭೆ ಮುಖ್ಯಾದಿಕಾರಿ
ರಾಜೇಶ್, ಪುರಸಭೆ ಸದಸ್ಯರಾದ ಜಿಗಣಿ ವಿನೋದ್, ಆನಂದ್ ಗೌಡ, ಮುರಳಿ, ಸಂಪಂಗಿ, ಜಿಗಣಿ ರಾಮಕೃಷ್ಣ, ಪುರಸಭೆ ಸದಸ್ಯರು ಹಾಗೂ ಸ್ಥಳೀಯರು ಹಾಜರಿದ್ದರು.
