ಉದಯವಾಹಿನಿ , ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿಯ ಬೊಮ್ಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಕೆ.ಮುನಿರಾಜು ಅವರು ಜಯಗಳಿಸಿರುವುದ್ದಾರೆಂದು ಚುನಾವಣಾ ಅಧಿಕಾರಿ ಜಿ.ಜೆ.ಮಂಜುಳಾ ಗೌಡ ಅವರು ತಿಳಿಸಿದರು.
೧೧ ನಿರ್ದೇಶಕ ರಿರುವ ಹಾಲು ಉತ್ಪಾದಕರ ಸಂಘದಲ್ಲಿ ೬ ಮತಗಳನ್ನು ಪಡೆದು ಅಧ್ಯಕ್ಷರಾಗಿ ಬಿ.ಕೆ.ಮುನಿರಾಜು, ಉಪಾಧ್ಯಕ್ಷ ರಾಗಿ ನಾಗರತ್ನಮ್ಮ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಬಿ.ಕೆ.ಮುನಿರಾಜು ಅವರು ಹೈನುಗಾರಿಕೆಯ ಅಭಿವೃದ್ಧಿ ಹಾಗೂ ರೈತರ ಅಭಿವೃದ್ಧಿಗೆ ಮತ್ತಷ್ಟು ಯೋಜನೆಗಳನ್ನು ರೂಪಿಸುವುದಾಗಿ ತಿಳಿಸಿದರು.
ಸಹಕಾರ ಸಂಘದ ಕಾರ್ಯದರ್ಶಿ ಮುನಿತಿಮ್ಮಯ್ಯ, ಸದಸ್ಯರಾದ ಟಿ. ಶಿವಣ್ಣ, ಸಲ್ಲೇಶ್ ಕುಮಾರ್, ಜಲಾರಪ್ಪ, ತಿಮ್ಮಕ್ಕ ಅವರ ಸಹಕಾರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು,ಉತ್ತಮ ನಿರ್ವಹಣೆ ಮಾಡುವುದಾಗಿ ನುಡಿದರು. ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಪ್ಪ, ಕಾಂಗ್ರೆಸ್ ಮುಖಂಡರಾದ ಬಿಳಿಶೀವಾಲೆ ಆನಂದ್, ಶಾಂತ್,ಮುನಿರಾಜು,ಲೋಕೇಶ್,ನಾಗರಾಜ್,ರವಿಕುಮಾರ್,ಬಿ.ಎಂ.ಶಿವಕುಮಾರ್, ಎನ್.ಮಂಜುನಾಥ ಉಪಸ್ಥಿತರಿದ್ದರು.
