ಉದಯವಾಹಿನಿ, ಆನೇಕಲ್ : ಯುವಕರು ಕ್ರೀಡೆಯಲ್ಲಿ ಬಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಗಟ್ಡಿಯಾಗಲು ಸಹಕಾರಿಯಾಗಿದೆ ಎಂದು ಬಿಎಸ್ಪಿ ಪಕ್ಷದ ರಾಜ್ಯ ಖಜಾಂಚಿಗಳಾದ ಡಾ|| ಚಿನ್ನಪ್ಪ ಚಿಕ್ಕಹಾಗಡೆರವರು ತಿಳಿಸಿದರು.
ಅವರು ದೊಮ್ಮಸಂದ್ರದಲ್ಲಿ ಸೂಪರ್ ಸಂಡೆ ಕ್ರಿಕೆಟರ್‍ಸ್ ತಂಡದಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದಂತಹ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವಕ/ಯುವತಿಯರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಗಳಿಗೆ ಶರಣಾಗುವುದನ್ನು ಕಂಡಿದ್ದೇವೆ.
ಇಂತಹ ಸಮಸ್ಯೆಗಳು ನಿವಾರಣೆ ಯಾಗಬೇಕಾದರೆ ಪ್ರತಿನಿತ್ಯ ಒಂದು ಗಂಟೆಗಳ ಕಾಲ ವ್ಯಾಯಾಮ, ಕ್ರೀಡೆ. ಯೋಗ. ದ್ಯಾನಗಳನ್ನು ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಿz ಎಂದರು. ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚು ಉತ್ತೇಜನ ನೀಡಬೇಕು ಮತ್ತು ಸರ್ಕಾರಗಳು ಸಹ ಕ್ರೀಡೆಗೆ ಹೆಚ್ಚು ಹೆಚ್ಚು ಪೋತ್ಸಾಹ ನೀಡಬೇಕು ಎಂದು ಹೇಳಿದರು, ಇನ್ನು ಪ್ರಥಮ ಬಹುಮಾನವನ್ನು ಕೊಡತಿ ಗ್ರಾಮದ ತಂಡ ಪಡೆದುಕೊಂಡರೆ, ಎರಡನೇ ಬಹುಮಾನವನ್ನು ದೊಮ್ಮಸಂದ್ರ ವಿನಾಯಕ ನಗರ ತಂಡ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಸದಸ್ಯೆ ಆರತಿ ಗೌಡ, ಆಯೋಜಕರಾದ ಮನೋಜ್, ವಿಶ್ವ, ಗೌರೀಶ್, ನಾಗರಾಜ್, ಶ್ರೀಕಾಂತ್, ಮೂರ್ತಿ, ನಾಗೇಶ್, ಕುಮಾರ್ ಮತ್ತು ಕ್ರೀಡಾಪಟುಗಳು ಬಾಗವಹಿಸಿದ್ದರು.
