ಉದಯವಾಹಿನಿ,ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ೩ ತಿಂಗಳಲ್ಲಿ ಜನವಿರೋಧಿ ಸರ್ಕಾರವಾಗಿ ಪರಿವರ್ತನೆಯಾಗಿದೆ.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವೂದಕ್ಕೂ ವಾರಂಟಿ ಇಲ್ಲ. ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿದೆ. ಎಲ್ಲಾ ಚುನಾವಣೆಗಳಲ್ಲೂ ಸೋಲನ್ನಪ್ಪಿದೆ ಬಡತನ ನಿರ್ಮೂಲನ ಮಾಡುವುದಾಗಿ ಹೇಳಿ ಯಾವುದೇನೊಂದು ಅಭಿವೃದ್ದಿ ಕಾರ್ಯಗಳು ಇಲ್ಲವಾಗಿದ್ದು ಮುಂದಿನ ದಿನಗಳಲ್ಲಿ ಮತದಾರರು ಕಾಂಗ್ರೇಸ್‌ಗೆ ತಕ್ಕ ಕಲಿಸುವ ಮೂಲಕ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಸಂಸದ ಎಸ್ ಮುನಿಸ್ವಾಮಿ ಭವಿಷ್ಯ ನುಡಿದರು.
ನಗರ ಹೊರವಲಯದ ಕಾಳಹಸ್ತಿಪುರ ಗೇಟ್ ಬಳಿಯ ರತ್ನ ಕನ್ವೇಷನ್ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಸ್ಥಾನಗಳಲ್ಲಿ ೨೮ ಸ್ಥಾನಗಳು ಬಿಜೆಪಿ ಪಾಲಾಗುವುದು ಖಚಿತವಾಗಿದೆ, ಬಿಜೆಪಿ ವಿರುದ್ದ ಸ್ವರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿನ ಸಚಿವರುಗಳು ಟಿಕೆಟ್ ನನಗೆ ಬೇಡಾ, ನಿನಗೆ ಬೇಡಾ ಎಂಬಂತೆ ಕಿತ್ತಾಡುವಂತಾಗಿರುವುದು ಕಾಂಗ್ರೇಸ್ಸಿನವರಿಗೆ ಬಿಜೆಪಿ ವಿರುದ್ದ ಸ್ವರ್ಧಿಸಲು ಹಿಂದೇಟು ಹಾಕುತ್ತಿರುವುದು ಜನಜನಿತವಾಗಿದೆ. ಕಾಂಗ್ರೇಸ್ ಪಕ್ಷದ ಮನೆಯು ರಾಜ್ಯದಲ್ಲಿ ಖಾಲಿಯಾಗಲಿದೆ ಎಂದರು.
ಭಾರತದ ಸಂವಿಧಾನದ ಶಿಲ್ಪಿ ಡಾ, ಬಿ,ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೇಸ್ ಸರ್ಕಾರದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಿಲ್ಲ. ರಾಷ್ಟ್ರದ ಸಮಸ್ತ ಹಿಂದುಗಳ ಕನಸಾಗಿದ್ದ ಆಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣವನ್ನು ನನಸು ಮಾಡಲು ಕಾರಣಕಾರ್ತರಾದ ಬಿಜೆಪಿ ಭೀಷ್ಮ ಎನಿಸಿದ್ದ ಲಾಲಾ ಕೃಷ್ಣ ಅಡ್ವಾನಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ. ಹಿಂದೆ ಒಂದೇ ಕುಟುಂಬದ ನೆಹರು, ಇಂದಿರಾ, ರಾಜೀವ್‌ಗಾಂಧಿ ಭಾರತ ರತ್ನ ಪ್ರಶಸ್ತಿ ಪಡೆದಿದ್ದರು ಅದರೆ ಬಿಜೆಪಿ ಪಕ್ಷವು ರಾಷ್ಟ್ರ ಭಕ್ತರಿಗೆ ನೀಡುವ ಮೂಲಕ ಪ್ರಶಸ್ತಿಗೆ ಗೌರವ ತಂದಂತಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!