ಉದಯವಾಹಿನಿ, ಬೆಂಗಳೂರು: ಸ್ನೇಹಿತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಆತನಿಂದ ಹಂತ ಹಂತವಾಗಿ 65 ಲಕ್ಷ ಹಣ ಪಡೆದು ವಿಶ್ವಾಸದ್ರೋಹ ಬಗೆದಿದ್ದ ಇಬ್ಬರು ಸಹೋದರರ ಪೈಕಿ ಒಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಮೂಲತಃ ಶಿವಮೊಗ್ಗದ ಮಣಿಕಂಠ ಎಂಬುವವರು ವಿಧಾನಸೌಧ ರಸ್ತೆಯಲ್ಲಿರುವ ಸಾಫ್ಟ್‍ವೇರ್ ಕಂಪೆನಿಯೊಂದರಲ್ಲಿ ಸಾಫ್ಟ್‍ವೇರ್ ಉದ್ಯೋಗಿ.
ಅಕ್ಷಯ್ ಕುಮಾರ್ ಹಾಗೂ ಈತನ ಅಣ್ಣ ಭರತ್ 18 ವರ್ಷಗಳಿಂದ ಮಣಿಕಂಠ ಅವರಿಗೆ ಸ್ನೇಹಿತನಾಗಿದ್ದು, ಸಹೋದರರು ಹಾಗೂ ಮತ್ತಿತರರು ಸೇರಿಕೊಂಡು ವೈಯಕ್ತಿಕ ಫೋಟೋಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ನಿನ್ನ ಮೊಬೈಲ್‍ನಿಂದ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೇಳುತ್ತಿದ್ದು, ನೀನು ಆತನಿಗೆ 12 ಲಕ್ಷ ಕೊಟ್ಟರೆ ಫೋಟೋಗಳನ್ನು ವಾಪಸ್ ಪಡೆದುಕೊಳ್ಳಬಹುದೆಂದು ತಿಳಿಸಿದ್ದಾರೆ.
