ಉದಯವಾಹಿನಿ, ಕೆಂಗೇರಿ: ತಂದೆ ತಾಯಂದಿರು, ಹಿರಿಯರು, ಶ್ರೀಗಳನ್ನು ನಿತ್ಯ ನಿರಂತರವಾಗಿ ಪೂಜಿಸಿ ಆರಾಧಿಸುತ್ತಾರೋ ಅಂತಹವರಿಂದ ಆರೋಗ್ಯವಂತ ಸಮಾಜವನ್ನು ಕಾಣಬಹುದು ಎಂದು ಹಿರೇಮಠ ದೊಡ್ಡಗುಣಿ ಮಠಾಧ್ಯಕ್ಷ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಯಶವಂತಪುರ ಕ್ಷೇತ್ರದ ಉಲ್ಲಾಳು ವಾರ್ಡಿನ ನಾಗದೇವನಹಳ್ಳಿಯ ಮರಳ ಸಿದ್ದೇಶ್ವರ ಪ್ರಾವಿಷನ್ ಸ್ಟೋರ್ ಮುಂಭಾಗ ಹಮ್ಮಿಕೊಂಡಿದ್ದ ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮಿಜಿ ರವರ ೫ನೇ ವರ್ಷದ ಪುಣ್ಯ ಸ್ಮರಣೆ ಮತ್ತು ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕಷ್ಟ ಜೀವಿಗಳು. ನೊಂದವರ ಬಾಳಿಗೆ ಬೆಳಕಾಗುವರೆ ನಿಜವಾದ ಸಜ್ಜನರು. ಖಾವಿ ಹಾಕಿದವರೆಲ್ಲರೂ ಸ್ವಾಮಿಜಿಗಳಲ್ಲ, ಮಾನವೀಯತೆಯಿಂದ ಎಲ್ಲ ವರ್ಗ, ಜಾತಿ ಮೀರಿ ಸೇವೆ ಮಾಡುವರಲ್ಲಿ ಪರಿಶುದ್ಧವಾದ ಶ್ರೀಗಳನ್ನು ಕಾಣಬಹುದು. ಎಂದ ಅವರು ಮನುಷ್ಯ, ಮನುಷ್ಯನಾಗಿ ಬಾಳುತ್ತಿಲ್ಲ, ಎಲ್ಲಡೆ ಮೋಸ, ವಂಚನೆ, ಕೊಲೆ, ದರೋಡೆ, ಜಾತಿ, ಜಾತಿಗಳ ನಡುವೆ ದ್ವೇಷ ಅಸೂಯೆ ತಂಡವವಾಡುತ್ತಿದೆ. ಮನುಷ್ಯ, ಮನುಷ್ಯರನ್ನು ಕೊಳ್ಳುವ ವ್ಯವಸ್ಥೆ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಉಲ್ಲಾಳು ವಾರ್ಡ್ ನ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಎನ್.ಸಿ. ಕುಮಾರ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಶಿವಕುಮಾರಸ್ವಾಮಿಜಿ ಅವರು ಲಕ್ಷಾಂತರ ಜನರಿಗೆ ವಿದ್ಯೆ, ಸಂಸ್ಕಾರ, ಮಾನವೀಯತೆ, ಸದ್ಗುಣ, ಅನ್ನದಾಸೋಹ, ಮಾನವೀಯ ಮೌಲ್ಯ, ಜಾತಿ, ಧರ್ಮ, ಬಡವ, ಶ್ರೀಮಂತರೆನ್ನದೆ ಎಲ್ಲರಿಗೂ ಶಿಕ್ಷಣ, ಅನ್ನದಾನ ಮಾಡಿದ ಮಹಾನ್ ಯೋಗಿ, ತ್ಯಾಗಿ ಎಂದು ಬಣ್ಣಿಸಿದರು.ಶಾಂತಿ, ಸಂಸ್ಕಾರ, ಧಾರ್ಮಿಕ ವಿಚಾರಧಾರೆಗಳನ್ನು ನಾಡು, ರಾಷ್ಟ್ರ, ವಿಶ್ವಕ್ಕೆ ಸಾರಿದ ಅವತಾರ ಪುರುಷ ಶಿವಕುಮಾರ ಶ್ರೀಗಳು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿನಾವೆಲ್ಲರೂ ನಡೆಯ ಬೇಕಾಗಿದೆ ಎಂದರು.
ಮರುಳ ಸಿದ್ದೇಶ್ವರ ಪ್ರಾವಿಷನ್ ಸ್ಟೋರ್ ಮಾಲೀಕ ಚನ್ನಬಸವ ಆರಾಧ್ಯ ಮಾತನಾಡಿ ಶಿವಕುಮಾರ ಸ್ವಾಮೀಜಿ ಅವರ ಪ್ರೇರಣೆಯಿಂದ ನಾಗದೇವನಹಳ್ಳಿಯ ಸಹೃದಯಿ ಜನರಿಂದ ಅನ್ನದಾಸೋಹ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಜಿ.ಮುನಿರಾಜು. ಜೆಡಿಎಸ್ ಮುಖಂಡ ಚಿಕ್ಕೇಗೌಡ, ಗೋವಿಂದಪ್ಪ, ವಿನಾಯಕಲೇಔಟ್ ಮಹದೇವಪ್ಪ, ಸಾಯಿ ಎಂಟರ್ ಪ್ರೈಸಸ್ ಮಹೇಶ್,ನಿವೃತ್ತ ಪೊಲೀಸ್ ಅಧಿಕಾರಿ ದೇವರಾಜ್,ರಕ್ಷಿತ್, ಚಂದ್ರಕಲಾ,ಸವಿತಾ, ನಾಗದೇವನಹಳ್ಳಿ ಬಡಾವಣೆಯ ಸಾರ್ವಜನಿಕರು ಹಾಗೂ ಅಕ್ಕ ಪಕ್ಕದ ಬಡಾವಣೆಯ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!