ಉದಯವಾಹಿನಿ, ಮೈಸೂರು: ಕರ್ನಾಟಕ ರೈತ ಕಲ್ಯಾಣ ಸಂಘದ ಸೇವೆ ಹಾಗೂ ಧ್ಯೇಯೋದ್ದೇಶಕ್ಕೆ ಕೈ ಜೋಡಿಸುವ ಇಂಗಿತ ವ್ಯಕ್ತಪಡಿಸಿ, ಹಾಸನ ಜಿಲ್ಲೆ ಹಾಗೂ ಹೊಳೆನರಸೀಪುರ ತಾಲೂಕಿನ ಮುಖಂಡರುಗಳು ಸಂಘಕ್ಕೆ ಸೇರ್ಪಡೆಯಾದರು.
ಸೋಮವಾರ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಮುಖಂಡ ಲೋಕೇಶ್, ಆನಂದ್, ಈ.ಮಂಜುನಾಥ್ ಹಾಗೂ ಹೊಳೆನರಸೀಪುದ ಶ್ರೀನಿವಾಸ್ ಎಚ್.ಬಿ ಅವರುಗಳು ಸಂಘಕ್ಕೆ ಸೇರ್ಪಡೆಗೊಂಡರು.
ಇದೇ ವೇಳೆ ಲೋಕೇಶ್‍ಅವರಿಗೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಆನಂದ್ ರವರನ್ನು ಹಾಸನ ಜಿಲ್ಲಾಧ್ಯಕ್ಷರನ್ನಾಗಿ, ಈ.ಮಂಜುನಾಥ್ ಅವರನ್ನು ಹಾಸನ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಶ್ರೀನಿವಾಸ್ ಎಚ್.ಬಿ ಅವರನ್ನು ಹೊಳೆನರಸೀಪುರ ತಾಲೂಕಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡರವರು ನೇಮಕಾತಿ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಹೇಮಂತ್‍ಕುಮಾರ್, ರಾಜ್ಯ ಕಾರ್ಯಧ್ಯಕ್ಷ ಕಣೇನೂರು ಜಗದೀಶ್, ರಾಜ್ಯ ಯುವ ಘಟಕದ ಅಧ್ಯಕ್ಷ ರುದ್ರ, ರಾಜ್ಯ ಪತ್ರಿಕಾ ಕಾರ್ಯದರ್ಶಿ ಹರೀಶ್.ಪಿ.ಗೌಡ, ಮನು ಮತ್ತು ರಾಕೇಶ್ ಉಪಸ್ಥಿತರಿದ್ದರು.
