
ಉದಯವಾಹಿನಿ, ಬಂಗಾರಪೇಟೆ :ಪುರಸಭೆಯಲ್ಲಿ ಭಾರಿ ಗೋಲ್‌ಮಾಲ್ ಆಗಿದ್ದು, ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ಎಸ್ಸಿ ಸಮುದಾಯ ಅಭಿವೃದಿಗೆ ಮೀಸಲಿಟ್ಟ ಹಣ ದುರುಪಯೋಗ ಮತ್ತು ತಾತ್ಸಾರಕ್ಕೆ ಸಂಬಂಧಪಟ್ಟಂತೆ ಉಗ್ರ ಹೋರಾಟ ನಡೆಸುತ್ತೇವೆಂದು ಕರ್ನಾಟಕ ದಲಿತ ರೈತಸೇನೆ ಸಂಸ್ಥಾಪಕ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ತಿಳಿಸಿದರು.
ಪಟ್ಟಣದ ಪುರಸಭೆ ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡು ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬಂಗಾರಪೇಟೆ ವಿಧಾನಸಭಾ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು, ಪುರಸಭೆ ವ್ಯಾಪ್ತಿಯಲ್ಲಿ ೨೭ವಾರ್ಡ್ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದವರು ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ಇಂತಿಷ್ಟು ಪ್ರಮಾಣದ ಅನುದಾನವನ್ನು ಬಿಡುಗಡೆ ಮಾಡಿರುತ್ತದೆ. ಎಂದರು.
ಪುರಸಭೆಗೆ ಒಳಪಟ್ಟಿರುವ ಎಷ್ಟು ಅಂಗಡಿಗಳಿವೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಟೆಂಡರ್‌ನಲ್ಲಿ ಭಾರಿ ಪ್ರಮಾಣದ ಗೋಲ್‌ಮಾಲ್ ಆಗಿದೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಆಗುತ್ತಿದೆ. ಹಾಗೂ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಖರೀದಿ ಮಾಡಿರುವ ಸಕ್ಕಿಂಗ್ ಮಿಷನ್ ಬಳಕೆಯಾಗದೆ ಮೂಲೆಯಲ್ಲಿ ಬಿದ್ದಿದೆ. ಹಾಗೂ ಇನ್ನಿತರ ವಿಷಯಗಳೊಳಗೊಂಡತೆ ಸಮಗ್ರ ತನಿಖೆಯಾಗಬೇಕು ಸರ್ಕಾರಿ ಹಣವನ್ನು ಪೋಲು ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದರು.
ಕಾರಹಳ್ಳಿ ಸರ್ವೆನಂ.೧೯೯ರಲ್ಲಿ ರಾಜ್ಯಪಾಲರು ಕರ್ನಾಟಕ ಸರ್ಕಾರ, ಆಡಳಿತಾಧಿಕಾರಿ ಪುರಸಭೆ ಕಾರ್ಯಲಯ ಉಪ ವಿಭಾಗಾಧಿಕಾರಿಗಳು, ಕೋಲಾರ ರವರ ಹೆಸರಿನಲ್ಲಿ ೨ಎಕರೆ ೧೦ಗುಂಟೆ ಜಮೀನನ್ನು ತಾಲ್ಲೂಕಾಡಳಿತ ನೀಡಿದ್ದು, ಈ ಜಮೀನು ಬಳಕೆ ಆಗಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು, ರಾಮಕೃಷ್ಣ ಹೆಗಡೆ ಬಳಿ ಸ್ಲಂಬೋರ್ಡ್ ವತಿಯಿಂದ ನಿರ್ಮಾಣವಾಗುತ್ತಿರುವ ಮನೆಗಳನ್ನು ಯಾರಿಗೆ ಹಂಚಿಕೆ ಮಾಡಿರುವ ವಿವರ, ಫಲಾನುಭವಿಗಳ ಪಟ್ಟಿ.
