ಉದಯವಾಹಿನಿ, ಕೆಂಗೇರಿ: ಸಂವಿಧಾನವು ಸರ್ವ ಜನತೆಯ ಹಕ್ಕುಗಳ ಮೂಲಭೂತವಾಗಿದೆ ಡಾ. ಬಿ. ಆರ್. ಅಂಬೇಡ್ಕರ್ ರವರು ಬರೆದು ಕೊಟ್ಟಿರುವ ವಿಶ್ವದ ಸರ್ವಶ್ರೇಷ್ಠ ಸಂವಿಧಾನ ನಮ್ಮದು ಹಾಗೂ ನಮ್ಮ ಸಂವಿಧಾನದ ಸೌಂದರ್ಯವೇ ಸಮಾನತೆ ಎಂದು ಶಾಸಕ ಎಸ್. ಟಿ. ಸೋಮಶೇಖರ್ ತಿಳಿಸಿದರು. ಯಶವಂತಪುರ ಕ್ಷೇತ್ರದ ಸೂಲಿಕೆರೆ ಗ್ರಾಮ ಪಂಚಾಯತಿ ಮುಂಭಾಗ ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ , ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಸಹಾಯದೊಂದಿಗೆ ೭೫ನೇ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿ ನಮ್ಮ ದೇಶವು ಸಂವಿಧಾನದ ಆಶಯದ ಮೇಲೆ ನಡೆಯುತ್ತಿದೆ ಸಂವಿಧಾನದ ಮಹತ್ವ ಮತ್ತು ಮೌಲ್ಯಗಳನ್ನು ದೇಶದ ಪ್ರತಿಯೊಬ್ಬರು ಗೌರವಿಸಿ ಉಳಿಸುವ ನೆಟ್ಟಿನಲ್ಲಿ ಸಾಗಬೇಕೆಂದು ಎಂದು ತಿಳಿಸಿದರು.ಗ್ರಾಮ ಪಂಚಾಯತಿ ಸದಸ್ಯ ಎಸ್.ಆರ್. ಮೋಹನ್ ಕುಮಾರ್ ಮಾತನಾಡಿ ಜನರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಉದ್ಧೇಶದಿಂದ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಪ್ರಾರಂಭಿಸಿದ್ದು, ಆದರ್ಶ ಸಮಾಜದ ಲಕ್ಷಣಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ, ಸಮುದಾಯದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಅಳೆಯಲಾಗುತ್ತದೆ. ನಾವು ಮೊದಲನೆಯದಾಗಿ ಕೊನೆಯದಾಗಿ ಭಾರತೀಯರೇ ಆಗಿದ್ದೇವೆಂಬ ಅಂಬೇಡ್ಕರ್ ಅವರ ಸಂದೇಶಗಳನ್ನು ಜನರಿಗೆ ಮುಟ್ಟಿಸುವುದು ಸಂವಿಧಾನ ಜಾಗೃತಿ ಜಾಥಾದ ಉದ್ಧೇಶವಾಗಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ದಾಕ್ಷಣಮ್ಮ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ವಿ. ಮಮತಾ, ಕಾರ್ಯದರ್ಶಿ ಯಶಸ್ವಿನಿ , ಗ್ರಾಮ ಪಂಚಾಯತಿ ಸದಸ್ಯರಾದ ಶೋಭ ತಿಮ್ಮೇಗೌಡ, ಬಿ. ವಿ. ರಾಮಚಂದ್ರ, ಮುನಿಲಕ್ಷ್ಮಿ ಮಂಜುನಾಥ್, ಸರಸ್ವತಿ ದೇವಿ ಸಿದ್ದರಾಜು, ಸುನಿತಾ ಮೂರ್ತಿ, ಸಮಾಜ ಸೇವಕ ವಿಜಯ್ ಕುಮಾರ್, ಚಿಕ್ಕನಹಳ್ಳಿ ಶಿವು ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿಯ ಸದಸ್ಯ ಅರುಂಧತಿ ನಾಗರಾಜ್ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಶ್ಯಾಮಲಾ,,ತಾಲ್ಲೂಕು ಪಂಚಾಯತ್ ಲೆಕ್ಕ ಅಧಿಕಾರಿ ನಾಗರಾಜು,ಸಹಾಯಕ ಕಾರ್ಯಪಾಲಕ ಅಭಿಯಂತರರು ವಿಜೇಂದ್ರ,ಕಚೇರಿ ಅಧಿಕ್ಷಕ ಪಿ.ರಾಘವೇಂದ್ರ, ಪ್ರದರ್ಜೆ ಸಹಾಯಕ ನಾರಾಯಣ, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!