ಉದಯವಾಹಿನಿ,ಬೀದರ್ : ಕೇಂದ್ರ ಸರ್ಕಾರದ ನೀತಿ ಧಿಕ್ಕರಿಸಿ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಮೃತ ಕಾಲದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಈಗ ಸಬ್ ಕಾ ವಿಶ್ವಾಸ್ ಅಂತ ಘೋಷಣೆಗಳಲ್ಲಿ ಮಾತ್ರವಿದೆ. ರಾಮ ರಾಜ್ಯ ಎನ್ನುವ ಸರ್ಕಾರ ಹಸಿವಿನ ಸೂಚ್ಯಾಂಕ 111ನೇ ಸ್ಥಾನದಿಂದ ಭಾರತವನ್ನು ಮೇಲೆತ್ತಲು ಯಾವ ಪ್ರಯತ್ನವನ್ನು ಬಜೆಟ್‍ನಲ್ಲಿ ಮಾಡಲಿಲ್ಲ. IಅಆS ಗೆ 21521.13 ಕೋಟಿಯಿಂದ21200 ಕೋಟಿಗೆ ಮಧ್ಯಂತರ ಬಜೆಟ್‍ನಲ್ಲಿ 300 ಕೋಟಿಗಿಂತ ಹೆಚ್ಚು ಬಜೆಟ್‍ಕಡಿತ ಮಾಡಲಾಗಿದೆ.
ಅನುದಾನ ಕಡಿತದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ವೇತನ ವಿಳಂಬ, ಬಾಡಿಗೆಪಾವತಿ, ಪೌಷ್ಠಿಕ ಆಹಾರಕ್ಕಾಗಿ ಹಣ ಬಿಡುಗಡೆ ಕಾಲಾನು ಕಾಲಾಕ್ಕೆ ಬಿಡುಗಡೆ ಇಲ್ಲ. ಇರುವ ಬಜೆಟ್ ಕಡಿತಗೊಳಿಸುವ ಪರಿಕಲ್ಪನೆಯಿರುವ ಸರ್ಕಾರ 2 ಕೋಟಿತಾಯಂದಿರ 8 ಕೋಟಿ ಮಕ್ಕಳ ಆರೋಗ್ಯ,ಆಹಾರ, ಶಿಕ್ಷಣದ ಹಕ್ಕನ್ನುಕಾಪಾಡಲು ಸಾಧ್ಯವೇ? ಕಳೆದ 5 ವರ್ಷಗಳಲ್ಲಿ 1 ರೂಪಾಯಿಯನ್ನುಅನುದಾನ, ವೇತನ ಹೆಚ್ಚುಳ ಮಾಡದೆ ಸಬ್ ಕಾ ವಿಕಾಸ್ ಎಂದರೆ ವಿಕಾಸ್ ವಾಗುತ್ತಿದೆಯೇ? ಎಂದು ಪ್ರಶ್ನಿಸಿದರು. ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಫೆ. 16 ರಂದು ದೇಶಾದಾದ್ಯಂತ ಮತ್ತೊಮ್ಮೆ ಅಂಗನವಾಡಿ ನೌಕರರು ಪ್ರತಿಭಟನೆಗಿಳಿಯಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ಸುಶೀಲಾ ಹತ್ತಿ, ಉಪಾಧ್ಯಕ್ಷೆ ಶಕುಂತಲಾ ಸೋನಿ, ಕಾರ್ಯದರ್ಶಿ ಶ್ರೀದೇವಿ ಚುಡೆ ತಿಳಿಸಿದರು.
