ಉದಯವಾಹಿನಿ, ಕುದೂರು: ಸೋಲೂರು ಹೋಬಳಿಯ ಬಿಟ್ಟಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ 75ನೇ ವರ್ಷದ ಅಮೃತ ಮಹೋತ್ಸವದ ಸಂವಿಧಾನ ರಥಯಾತ್ರೆ ಸ್ವಾಗತಿಸಲಾಯಿತು.
ಜಿಲ್ಲಾಡಳಿತ ಸಂವಿಧಾನದ ಕಿರುಹೊತ್ತಿಗೆಯನ್ನು ಜಿಲ್ಲೆಯ ಪ್ರತಿ ಮನೆಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಬಿಟ್ಟಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗರಂಗಯ್ಯ ಅಭಿಪ್ರಾಯಪಟ್ಟರು.
‘ನಮ್ಮ ಸಂವಿಧಾನ ಇಡೀ ವಿಶ್ವಕ್ಕೆ ಅತ್ಯಂತ ಬಹು ದೊಡ್ಡ ಸಂವಿಧಾನವಾಗಿದೆ. ಇಂತಹ ಪವಿತ್ರ ಸಂವಿಧಾನವನ್ನು ನಾವೆಲ್ಲರೂ ಅರಿಯಬೇಕು. ಸಂವಿಧಾನವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಿದರೆ, ಸುಂದರವಾದ ಬದುಕನ್ನು ಕಟ್ಟಿಕೊಳ್ಳಬಹುದು’ ಎಂದು ಸಿದ್ದಗಂಗಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಗಡಿ ರಂಗಯ್ಯ ಹೇಳಿದರು.
ಹಾಪ್ ಕಾಮ್ಸ್ ಮಾಜಿ ನಿರ್ದೆಶಕ ಮಂಜೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಕಾಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್, ನೋಡಲ್ ಅಧಿಕಾರಿ ಪರಿಮಳ, ಭಾಗ್ಯ, ಶ್ರೀನಿವಾಸ್, ಹೇಮಂತ್, ಮಂಜು ಇದ್ದರು.
