ಉದಯವಾಹಿನಿ, ಚನ್ನಪಟ್ಟಣ: ತಾಲ್ಲೂಕಿನ ತಗಚಗೆರೆ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯಾಸಿನ್ (36) ಮೃತಪಟ್ಟವರು. ಇವರು ನಗರದ ನಿಜಾಮಿ ಚೌಕ್ ನಿವಾಸಿ ಕೌಸುಮೀಯಾ ಅವರ ಮಗ. ವೃತ್ತಿಯಲ್ಲಿ ಬೈಕ್ ಮ್ಯಾಕನಿಕ್ ಆಗಿರುವ ಈತ ಕಾರ್ಯನಿಮಿತ್ತ ತಗಚಗೆರೆಗೆ ತೆರಳಿ ವಾಪಸ್ ಬರುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಯಾಸಿನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
