ಉದಯವಾಹಿನಿ, ಚಿಕ್ಕಬಳ್ಳಾಪುರ: ಶಾಲಾ ಕಾಲೇಜುಗಳಲ್ಲಿ ಜ್ಞಾನದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಎಂದು ಪೊಲೀಸ್ ಇಲಾಖೆಯ ಉಪ ಅಧೀಕ್ಷಕ ಶಿವಕುಮಾರ್ ರವರು ತಿಳಿಸಿದರು.
ಅವರು ತಾಲ್ಲೂಕಿನ ದೇವಸ್ಥಾನದ ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ’ನಮ್ಮ ಸಂಸ್ಕೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣ ದೊರೆಯುತ್ತಿದೆ ಆದರೆ ದೇಶದ ಇತಿಹಾಸ ಮತ್ತು ಈ ಮಣ್ಣಿನ ಪರಂಪರೆಯ ಅರಿವು ಮೂಡಿಸುವ ನೈತಿಕ ಶಿಕ್ಷಣ ನೀಡದಿದ್ದರೆ ಕ್ರಮೇಣ ನಮ್ಮ ಸಂಸ್ಕೃತಿ ಕಣ್ಮರೆಯಾಗುತ್ತದೆ ಎಂದರು.
ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸಾಮಾಜಿಕ ಜಾಲತಾಣದ ದಾಸರಾಗುತ್ತಿ ದ್ದಾರೆ ಇದರಿಂದ ಹೊರಬರದಿದ್ದರೆ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಶಿಕ್ಷಣಕ್ಕೆ ಪೂರಕವಾಗುವ ಸಾಮಾಜಿಕ ಜಾಲತಾಣವನ್ನು ಬಹಳ ಎಚ್ಚರಿಕೆಯಿಂದ ಬಳಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ತೋಟದ ಮನೆಯ ಮಹಾದಾನಿ ಸತ್ಯನಾರಾಯಣ ರವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಪಡೆಯಲು ಕಠಿಣ ಪರಿಶ್ರಮ ಹಾಗೂ ಆತ್ಮ ವಿಶ್ವಾಸ ಬಹಳ ಮುಖ್ಯ ಪ್ರತಿಭೆಗೆ ನಗರ ಹಳ್ಳಿ ಎಂಬ ವ್ಯತ್ಯಾಸವಿರುವುದಿಲ್ಲ ಅತಿ ಹೆಚ್ಚು ಪ್ರತಿಭಾನ್ವಿತರ ಉಗಮ ಸ್ಥಾನವೆಂದರೆ ಗ್ರಾಮಾಂತರ ಪ್ರದೇಶ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಹಾದಾನಿ ಸತ್ಯನಾರಾಯಣ ರವರು ಅತಿ ಹೆಚ್ಚು ಅಂಕಗಳು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಂಡ್ ಸೆಟ್ ಸಾಮಗ್ರಿಗಳು ನೀಡಿ ಗೌರವಿಸಿದರು.
ಶಾಲಾ ಆವರಣದಲ್ಲಿ ಹಿಂದಿನ ಕಾಲದ ಜನ ಜೀವನವನ್ನು ಪರಿಚಯಿಸುವ ದೃಷ್ಟಿಯಿಂದ ಅವರು ಉಪಯೋಗಿಸುತ್ತಿದ್ದ ಬಾವಿ,ಗುಡಿಸಲು, ಮಜ್ಜಿಗೆ ಕಡಿಯುವ ಸಾಮಗ್ರಿ ಹಾಗೂ ರೈತರು ಉಪಯೋಗಿಸುತ್ತಿದ್ದ ಸಾಮಗ್ರಿಗಳು ಸೇರಿದಂತೆ ಸುಮಾರು ೨೦೦ ಕ್ಕೂ ಸಾಮಾಗ್ರಿಗಳ ಪ್ರದರ್ಶನ ಸಾರ್ವಜನಿಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್, ಹಿರಿಯ ಮುಖಂಡ ರಾಮಣ್ಣ, ಸಿ ಆರ್ ಪಿ ಸುಜಾತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ ತಾಲೂಕು ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶಿಕ್ಷಕರಾದ ಜಯರಾಂ, ಮಂಜಳಾ ಗೋಪಾಲಾಚಾರ್, ಹನುಮಂತ ರೆಡ್ಡಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!