ಉದಯವಾಹಿನಿ, ಆನೇಕಲ್: ಪಠ್ಯೇತರ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳ ಬೌದ್ದಿಕ ಮಟ್ಟ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ಸಹಕಾರಿಯಾಗಲಿದೆ ಎಂದು ಸನ್ ಬೀಮ್ ಇಂಟರ್ ನ್ಯಾಷ್ ನಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಎನ್.ಹನುಮಂತರೆಡ್ಡಿರವರು ತಿಳಿಸಿದರು.
ಅವರು ಮೈಲಸಂದ್ರ ಗ್ರಾಮದಲ್ಲಿರುವ ಸನ್ ಬೀಮ್ ಇಂಟರ್ ನ್ಯಾಷ್ ನಲ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕಕ್ಕೆ ಚಾಲನೆ ನೀಡಿ ಮಾತನಾಡಿದರು,ಮಕ್ಕಳು ಟಿ,ವಿ. ಮೊಬೈಲ್ ದಾಸರಾಗದೆ ಪರಿಸರ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಬಾಗಿಯಾಗಬೇಕು ಎಂದರು. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸುವ ಉದ್ದೇಶದಿಂದ ಈ ವೇದಿಕೆಯನ್ನು ಕಲ್ಪಿಸಲಾಗಿದೆ ಎಂದರು.
ಇನ್ನು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸ್ವತಃ ತಾವೇ ತಯಾರು ಮಾಡಿರುವ ವಸ್ತುಗಳ ಬಗ್ಗೆ ಮತ್ತು ಅದರ ಉಪಯೋಗಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ ದೃಶ್ಯಗಳು ಕಂಡು ಬಂತು.
ಕಾರ್ಯಕ್ರಮದಲ್ಲಿ ಸನ್ ಬೀಮ್ ಇಂಟರ್ ನ್ಯಾಷ್ ನಲ್ ಶಾಲೆಯ ಕಾರ್ಯದರ್ಶಿ ಸುಂದರ್ ರೆಡ್ಡಿ, ಟ್ರಸ್ಟಿಗಳಾದ ಕಾಂತಮ್ಮ, ಆಡಳಿತ ಅದಿಕಾರಿ ಪ್ರಸಾದ ಶ್ರೀಕೃಷ್ಣ, ಪ್ರಾಂಶುಪಾಲರಾದ ರೂಪ ಮುಖರ್ಜಿ ಹಾಗೂ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಬಾಗವಹಿಸಿದ್ದರು.
