ಉದಯವಾಹಿನಿ, ಜಗಳೂರು: ಕೇಂದ್ರಕ್ಕೆ ಸಲ್ಲಿಸಲಾಗಿರುವ ನ್ಯಾ.ಸದಾ ಶಿವ ಆಯೋಗ ಶಿಫಾರಸ್ಸನ್ನು ಹಿಂಪಡೆದು ಯಥಾ ಸ್ಥಿತಿಯಲ್ಲಿ ಮೀಸಲಾತಿ ಒದಗಿಸಬೇಕು ಎಂದು ಚಿತ್ರದುರ್ಗದ ಬಂಜಾರ್ ಗುರುಪೀಠದ ಸರದಾರ್ ಸೇವಲಾಲ್ ಸ್ವಾಮೀಜಿ ಒತ್ತಾಯಿಸಿದರು.ಪಟ್ಟಣದಲ್ಲಿ 285 ನೇ ಸಂತ ಸೇವಲಾಲ್ ಜಯಂತಿ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖಬೀದಿಗಳ ಮೂಲಕ ತಾಲೂಕು ಕಛೇರಿಯವರೆಗೆ ಬಂಜಾರ ಸಮುದಾಯದಿಂದ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯಲ್ಲಿ ಸಾನಿಧ್ಯವಹಿಸಿ ನಂತರ ತಾಲೂಕು ಕಛೇರಿ ಮುಂಬಾಗ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ಪರಿಶಿಷ್ಟ ಸಮುದಾಯಗಳಲ್ಲಿ 101 ಜಾತಿಗಳೂ ಸಂವಿಧಾ ನಬದ್ದವಾಗಿ ಸಮಾನ ಮೀಸಲಾತಿಗೆ ಅರ್ಹರು.ಆದರೆ ರಾಜ್ಯ ಸರ್ಕಾರ ಕೇವಲ ಕೆಲವೇ ಎಸ್ ಸಿ ಸಮುದಾಯ ಗಳಿಗೆ ಒಳಮೀಸಲಾತಿಗೆ ಶಿಫಾರಸ್ಸು ಮಾಡಿರುವುದು ಸಲ್ಲದು.ಕೂಡಲೇ ಹಿಂಪಡೆಯಬೇಕು.ಇಲ್ಲವಾದರೆಕೊರಚ,ಲಂಬಾಣಿ,ಬೋವಿ,ಸಮುದಾಯಗಳು ಬೀದಿಳಿ ದುಹೊರಾಟ ನಡೆಸುವ ಮೂಲಕ ಮುಖ್ಯಮಂತ್ರಿ ನಿವಾಸ ಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ವರಿಸಿದರು.ಬಂಜಾರ ಸಮುದಾಯದ ಆರಾಧ್ಯ ದೈವ,ಸಂತ ಸೇವ ಲಾಲ್ ಅವರ 285 ನೇ ಜಯಂತ್ಯೋತ್ಸವ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದ ಚಿನ್ನಿಕಟ್ಟೆಯಲ್ಲಿ ಫೆ 13 ರಿಂದ 15 ರವೆರೆಗೆ ಅದ್ದೂರಿಯಾಗಿ ಜರುಗ ಲಿದ್ದು.ರಾಜ್ಯದ ಮೂಲೆಮೂಲೆಗಳಿಂದ ಬಂಜಾರ ಸಮು ದಾಯದ ಮುಖಂಡರುಗಳು,ಕಲಾವಿದರು,ಹಾಗೂ ಸಮಾ ಜದ ಮಾಲಾಧಾರಿಗಳಾಗಿ,ಭಜನೆಯೊಂದಿಗೆ ಕಾರ್ಯ ಕ್ರಮ ದಲ್ಲಿ ಭಾಗವಹಿಸಲಿದ್ದಾರೆ.ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿ ದ್ದಾರೆ.ಅಲ್ಲದೆ ರಾಜ್ಯದ ಹಾಲಿ ಮಾಜಿ ಸಚಿವರು,ಶಾಸಕ ರುಗಳು ಆಗಮಿಸಲಿದ್ದಾರೆ.ಈ ವೇಳೆ ರಾಜ್ಯದ ಬಂಜಾರ ಸಮುದಾಯಕ್ಕೆ ನ್ಯಾಯ ಒದಗಿಸಿ ಲೋಕಸೇವ ಆಯೋ ಗಕ್ಕೆ ಒಬ್ಬ ಸದಸ್ಯರ ಆಯ್ಕೆ.ಯಾವುದಾದರೊಂದು ವಿಶ್ವ ವಿದ್ಯಾನಿಲಯಕ್ಕೆ ಕುಲಪತಿ ನೇಮಕ.ತಾಂಡಾ ಅಭಿವೃದ್ದಿ ನಿಗಮಕ್ಕೆ ₹500ಕೋಟಿ ಅನುದಾನ ಮೀಸಲಿಡಲು ಸೇರಿದಂತೆ ವಿವಿದ ಹಕ್ಕೊತ್ತಾಯಗಳನ್ನು ಮಂಡಿಸಲಾಗು ವುದು ಎಂದು ತಿಳಿಸಿದರು.ತಾಲೂಕಿನಲ್ಲಿ ಬಂಜಾರ ಸಮುದಾಯಕ್ಕೆ ಒಂದು ಭವನ, ಮಂದಿರವಿಲ್ಲ ಮುಂದಿನ ವರ್ಷದ ಸೇವಲಾಲ್ ಜಯಂ ತ್ಯೋತ್ಸವ ವೇಳೆಗೆ ಪಟ್ಟಣದಲ್ಲಿ ಸಮುದಾಯಭವನ ನಿರ್ಮಾಣಮಾಡಲು ಸ್ಥಳೀಯ ಶಾಸಕರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಸಂಸದ ಜಿಎಂ ಸಿದ್ದೇಶ್ವರ್ ಪುತ್ರ ಅನಿತ್ ಕುಮಾರ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಸೂರ ಗೊಂಡನಕಪ್ಪ ಧರ್ಮಾಧಿಕಾರಿ ಬಾಲಕೃಷ್ಣ ಮಹಾರಾಜ್, ಧರ್ಮದರ್ಶಿ ವೆಂಕಟೇಶ್,ಬಂಜಾರ ಸಂಘದ ತಾಲೂಕು ಅಧ್ಯಕ್ಷ ಕೆ.ಜಿ.ಪುರುಷೋತ್ತಮ ನಾಯ್ಕ,ಕಾರ್ಯದರ್ಶಿ ಸುರೇಶ್ ನಾಯ್ಕ,ಮುಖಂಡರಾದ.ನರೇನಹಳ್ಳಿ ಕುಮಾರ ನಾಯ್ಕ.ದತ್ತು ,ಜ್ಯೋತಿ ನಾಯ್ಕ,ಮೂರ್ತಿನಾಯ್ಕ,ಮಂಜಾ ನಯ್ಕ,ರೇವಣ್ಣನಾಯ್ಕ,ಕೊಟ್ರೇಶ್ ನಾಯ್ಕ,ಮಾಜಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ನಾಯ್ಕ,ಸೇರಿದಂತೆ ಭಾಗವಹಿಸಿದ್ದರು.
