ಉದಯವಾಹಿನಿ, ಸಿಂದಗಿ: ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ಸುತ್ತ- ಮುತ್ತಲಿನ ಜಿಲ್ಲೆಗಳಲ್ಲಿ ಬೈಕ್ ಮತ್ತು ಮನೆಗಳ್ಳತನ ಮಾಡುತ್ತಿದ್ದ 2 ಪ್ರತ್ಯೆಕ ಪ್ರಕರಣವನ್ನು ಸಿಂದಗಿ ಠಾಣೆ ಪೆÇೀಲಿಸ್ ಸಿಬ್ಬಂದಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಸಿಂದಗಿ ಠಾಣೆಯ ಪೆÇಲೀಸ್ ಸಿಬ್ಬಂದಿಗಳ ಕಾರ್ಯ ಶ್ಲಾಘನಿಯವಾದುದ್ದು ಎಂದು ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವನೆ ಹೇಳಿದರು.
ಪಟ್ಟಣದ ಪೆÇೀಲಿಸ್ ಠಾಣೆಯಲ್ಲಿ ಪತ್ರಿಕಾ ನಡೆಸಿ ಮಾತನಾಡಿದ ಅವರು ಸಿಂದಗಿ, ಕಲಬುರ್ಗಿ, ಯಾದಗಿರಿ ಸೇರಿದಂತೆ ಇದುವರೆಗೆ 37 ಬೈಕ್ಗಳನ್ನು ಕಳ್ಳತನ ಮಾಡಿದ್ದು, ಇದರಲ್ಲಿ 14 ಕಡೆ ಪ್ರಕರಣ ದಾಖಲಾಗಿದೆ. ಕಳ್ಳತನ ಮಾಡಲು ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದೆವೆ. ಪ್ರಕರಣದಲ್ಲಿ ಬಂದಿತರಾದ ಬಸವರಾಜ,ಹುಲುಗಪ್ಪ,ಕೊಂಡಯ್ಯ,ರವಿಕುಮಾರ ಇದ್ದು ಇವರು ಶಹಾಪುರ ಗ್ರಾಮದವರಾಗಿದ್ದಾರೆ.
ಮತ್ತು ಪಟ್ಟಣದಲ್ಲಿ ಮನೆ ಮತ್ತು ಅಂಗಡಿ ಕಳ್ಳತನ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಬಂದಿಸಿದ್ದು, ಬಂದಿತರಿಂದ 2,20,000/ ಹಣ ಜಪ್ತಿ ಮಾಡಲಾಗಿದೆ.
ಇಂಡಿ ಮತ್ತು ಸಿಂದಗಿಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದಿದೆ.ಬಂದಿತ ಆರೋಪಿಗಳಾದ ಪ್ರಭು ಹಲಗಿ,ಅನೀಲ, ನಾಯ್ಕೊಡಿ,ಬಸವರಾಜ ಮಾದರ ಇದ್ದು ಆರೋಪಿಗಳು ಸಿಂದಗಿ ಪಟ್ಟಣದ ಗೊಲಿಬಾರ ಮಡ್ಡಿಯವರಾಗಿದ್ದಾರೆಂದು ತಿಳಿಸಿದರು.
ಪ್ರಕರಣ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿಷ್ಠೆ ಕಾರ್ಯ ನಿರ್ವಹಿಸಿದ ಪೆÇೀಲಿಸ್ ಸಿಬ್ಬಂದಿಗೆ ಬಹುಮಾನ ನೀಡಲಾಗುತ್ತಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೇಚ್ಚುವರಿ ಪೆÇೀಲಿಸ್ ವರಿಷ್ಟಾಧಿಕಾರಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಇಂಡಿ ಉಪಾಧಿಕ್ಷಕರಾದ ಜಗದೀಶ,ಹೆಚ್ ಎಸ್ ಸಿಂದಗಿ ಆರಕ್ಷಕ ವೃತ್ತ ನಿರೀಕ್ಷಕರಾದ ನಾನಾಗೌಡ ಪೆÇೀಲಿಸ್ ಪಾಟೀಲ, ಠಾಣಾಧಿಕಾರಿಗಳಾದ ಭೀಮಪ್ಪ ರಬಕವಿ, ಸಿಬ್ಬಂದಿಗಳಾದ ಸುರೇಶ ಕೊಂಡಿ, ನಿಂಗಪ್ಪ ಪುಜಾರಿ, ಭಿಮು ಲಮಾಣಿ, ರಾಜೇಶ ಕಟ್ಟಿಮನಿ, ಪ್ರೇಮಕುಮಾರ ನಾಗರಾಳ,ಉಮೇಶ ನಂದಶೇಟ್ಟಿ, ಸಿದ್ದನಗೌಡ ಬಿರಾದರ, ಜಕ್ಕಪ್ಪ ಕೊರೆ,ಈರಣ್ಣ ಬತಗುಣಕಿ,ಜಟ್ಟೆಪ್ಪ ದೊಡಮನಿ, ಪರಶುರಾಮ ಗೊರಗುಂಡಗಿ ಭಗವಂತ ಮುಳಸಾವಳಗಿ,
ಚಾಲಕರಾದ ಮೈಬೂಬ ಸೇರಿದಂತೆ ಅನೇಕರಿದ್ದರು.
