ಉದಯವಾಹಿನಿ, ಸಂಡೂರು : ಜಿಲ್ಲೆಯ ಕಾಂಗ್ರೆಸ್ ನ ಭದ್ರ ಕೋಟೆ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿರುವ ಕೆ.ಎಸ್.ದಿವಾಕರ್ ಅವರನ್ನು ಬಿಟ್ಟು. ಬೇರೆ ಅಭ್ಯರ್ಥಿ ಹಾಕಿದರೆ. ಅದು ಬಿಜೆಪಿಗೇ ಪೆಟ್ಟಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಕ್ಷೇತ್ರದ ಬಿಜೆಪಿ ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು.
ಬಳ್ಳಾರಿ ಪಾಲಿಕೆಯಲ್ಲಿ ಸದಸ್ಯರಾಗಿ ಜನ ಸೇವೆ ಮಾಡಿದ್ದ ದಿವಾಕರ್ 2018 ರ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿ. ಅಲ್ಲಿನ ಜನರೊಂದಿಗೆ ಬೆರೆತು ಅನೇಕ ಕಾರ್ಯಕ್ರಮಳ ಮೂಲಕ ಗಮನ ಸೆಳೆದಿದ್ದರು.
ಆದರೆ ಅಂತಿಮವಾಗಿ ಬಿ.ಶ್ರೀರಾಮುಲು ಅವರು ಅಲ್ಲಿ ಅಭ್ಯರ್ಥಿಯಾಗಿ ಬಂದಿದ್ದರಿಂದ ಅನಿವಾರ್ಯವಾಗಿ ಸ್ಪರ್ಧೆಯಿಂದ ಹಿಂದಿ ಸರಿಯಬೇಕಾಯಿತು.
ಆಗ ಶ್ರೀರಾಮುಲು ಅವರು ಮುಂಬರುವ ಚುನಾವಣೆಯಲ್ಲಿ ನೀವು ಬೇರೊಂದು ಕ್ಷೇತ್ರದಿಂದ ಕಣಕ್ಕಿಳಿಯಲು ವ್ಯವಸ್ಥೆ ಮಾಡಲುದೆಂದು ಸಂಡೂರಿನಿಂದ ಪ್ರಯತ್ನಿಸುವಂತೆ ಸೂಚನೆ ನೀಡಿದ್ದರಂತೆ. ಅವರ ಸೂಚನೆಯಂತೆ ಸಂಡೂರು ಕ್ಷೇತ್ರದಲ್ಲಿ ಸಂಚರಿಸಿ ಟಿಕೆಟ್ ಗೆ ಪ್ರಯತ್ನಿಸಿದರೂ ಕೊನೆಗೆ ರಾಘವೇಂದ್ರಗೆ ಟಿಕೆಟ್ ಸಿಕ್ಕಿತು. ಸಂಡೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಈ.ತುಕರಾಂ ಅವರು ಶಾದಕರಾಗಿ, ಸಚಿವರಾಗಿ ಕಳೆದ 15 ವರ್ಷಗಳಿಂದ ಜನ ಸೇವೆ ಮಾಡುತ್ತಿದ್ದಾರೆ.
ಮೊದಲ ಚುನಾವಣೆಯಲ್ಲಿ 2008 ರಲ್ಲಿ 20 ಸಾವಿರಕ್ಕೂ ಮತಗಳ ಅಂತರದಿಂದ ಗೆದ್ದಿದ್ದ ಅವರು, 2013 ರ ಚುನಾವಣೆಯಲ್ಲಿ 34 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಕಾರಣ ಆಗ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಇರಲಿಲ್ಲ. ಆದರೆ 2018 ರಲ್ಲಿ ಕೊನೆ ಕ್ಷಣದಲ್ಲಿ ರಾಘವೇಂದ್ರ (ಮಂಜು) ಪ್ರಬಲ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಸಂಡೂರಿನ ರಾಜ ಮನೆತನದ ಕಾರ್ತಿಕ್ ಘೋರ್ಪಡೆ ಅವರು ಬೆಂಬಲಿಸಿದ್ದು ಸಹಕಾರಿಯಾಗಿ ತುಕರಾಂ ಅವರ ಗೆಲುವಿನ ಅಂತರವನ್ನು 14 ಸಾವಿರಕ್ಕೆ ಇಳಿಯುವಂತೆ ಮಾಡಿದರು.
