ಉದಯವಾಹಿನಿ, ಬೆಂಗಳೂರು: ಸುಮಾರು ಒಂದು ಕೋಟಿ 45 ಲಕ್ಷ ಮೌಲ್ಯದ ನಿಷೇಧಿತ ತಂಬಾಕು/ನಿಕೋಟಿನ್ ಉತ್ಪನ್ನಗಳನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದವರು ಜಪ್ತಿ ಮಾಡಿ ಒಂಭತ್ತು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ನಗರದ ಚಾಮರಾಜಪೇಟೆ, ರಾಮಮೂರ್ತಿನಗರ ಹಾಗೂ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರ್ಕಾರದಿಂದ ನಿಷೇದಿಸಲ್ಪಟ್ಟ ತಂಬಾಕು/ನಿಕೋಟಿನ್ ಉತ್ಪನ್ನಗಳನ್ನು ಯಾವುದೇ ಪರವಾನಗಿ ಹೊಂದದೇ ಸಂಗ್ರಹಿಸಿ ಆರೋಪಿಗಳು ಇಟ್ಟುಕೊಂಡಿದ್ದರು.
ಇದರಲ್ಲಿ ತಂಬಾಕು ಹಾಗೂ ನಿಕೋಟಿನ್ ಅಂಶವಿರುವ ವಿವಿಧ ಉತ್ಪನ್ನಗಳಾದ ಅಪ್ಜಲ್ ಎಂಬ ಹೆಸರಿನ ಮೊಲಾಸಿಸ್ (ಹುಕ್ಕಾ ಬಾರ್‍ಗೆ ಬಳಸುವ ಉತ್ಪನ್ನ) ಮತ್ತು ತಂಬಾಕು ಉತ್ಪನ್ನ ಇರುವಂತಹ ದಿಲ್‍ಬಾಗ್, ಜೆಡ್ ಎಲ್-1, ಆ್ಯಕ್ಷನ್-7, ಬಾದ್‍ಷಾ, ಮಹಾ ರಾಯಲ್-717 ಹಾಗೂ ಇನ್ನಿತರೆ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ತರಿಗೆ ಮಾರಾಟ ಮಾಡಿ ಹೆಚ್ಚಿನ ಹಣ ಪಡೆಯುತ್ತಿದ್ದರು.
