ಉದಯವಾಹಿನಿ, ಚಿತ್ರದುರ್ಗ : ಸಂತ ಶ್ರೀ ಸೇವಾಲಾಲ್ ಅವರ ತತ್ವಾದರ್ಶ, ಮಾರ್ಗದರ್ಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಿಲು ನಾವೆಲ್ಲರೂ ಶ್ರಮಿಸೋಣ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸಂತ ಶ್ರೀ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರುಜ್ಞಾನಿಗಳು, ದಾರ್ಶನಿಕರು, ಸಂತರು, ಮಹನೀಯರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದ್ದು, ಸಂತ ಶ್ರೀ ಸೇವಾಲಾಲ್ ಅವರ ಆದರ್ಶಗಳು ನಮ್ಮ ಮುಂದಿವೆ. ಅವರ ತತ್ವಾದರ್ಶ, ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಕಾರ್ಯದರ್ಶಿ ಕೆ.ಮಂಜುನಾಥ ನಾಯ್ಕ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ದಾರ್ಶನಿಕರು, ಸಂತರು, ಶ್ರೇಷ್ಟರೂ ಎನಿಸಿಕೊಂಡಿರುವ ಸಂತ ಶ್ರೀ ಸೇವಾಲಾಲ್ ಅವರ ಜಯಂತಿ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಎಲ್ಲ ಜನಾಂಗದಲ್ಲಿಯೂ ಶ್ರೇಷ್ಟ ದಾರ್ಶನಿಕರು ಹುಟ್ಟಿ ತಮ್ಮ ಜ್ಞಾನವನ್ನು ಸರ್ವ ಜನಾಂಗಕ್ಕೆ ಹಾಗೂ ಸಮಾಜಕ್ಕೆ ಧಾರೆ ಎರೆದಿದ್ದಾರೆ. ಸಂತ ಶ್ರೀ ಸೇವಾಲಾಲ್ ಅವರನ್ನು ಮಹಾಜ್ಞಾನಿಯೂ ಹಾಗೂ ತ್ರಿಕಾಲ ಜ್ಞಾನಿ ಎಂತಲೂ ಕರೆಯುತ್ತೇವೆ. ಲಂಬಾಣಿ ಸಮುದಾಯ ತಮ್ಮ ಭಾಷೆಯಲ್ಲಿ ಬಂಜಾರ ಜನಾಂಗ ಹಾಗೂ ಇತರೆ ಜನಾಂಗವೂ ಒಳಗೊಂಡಂತೆ ಇಡೀ ಮಾನವ ಜನಾಂಗಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ ಎಂದು ಹೇಳಿದರು.ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಅಧ್ಯಕ್ಷ ಆರ್. ನಾಗೇಂದ್ರನಾಯ್ಕ ಮಾತನಾಡಿ, ದಾರ್ಶನಿಕರು, ಪವಾಡ ಪುರುಷರಾಗಿರುವ ಸಂತ ಶ್ರೀ ಸೇವಾಲಾಲ್ ಮಹಾರಾಜರು ಹಸಿದವರಿಗೆ ಊಟ ಕೊಡಿ, ಬಾಯಾರಿದವರಿಗೆ ನೀರು ಕೊಡಿ, ಜೀವನದಲ್ಲಿ ಕ್ರೋಧ ಎಂಬುದನ್ನು ಸುಟ್ಟು ಹಾಕಿ, ಇದೇ ಧರ್ಮ, ಇದೇ ಸತ್ಯದ ಮಾರ್ಗ ಎಂಬ ಸಂದೇಶ ನೀಡಿದ್ದಾರೆ ಎಂದು ತಿಳಿಸಿದ ಅವರು, ಸೇವಾಲಾಲರ ಜೀವನ ಚರಿತ್ರೆ ರೋಮಾಂಚಕವಾಗಿದೆ. ಸತ್ಯ, ನ್ಯಾಯದ ಮಾರ್ಗ ಹೇಗಿರಬೇಕು ಎಂದು ಅವರು ಬದುಕು ತೋರಿಸಿದ್ದಾರೆ, ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!