ಉದಯವಾಹಿನಿ, ಬೆಂಗಳೂರು: ವಿಧಾನ ಪರಿಷತ್‍ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಬೆಂಗಳೂರು ನಗರ, ಬಿಬಿಎಂಪಿ, ನಗರ ಮತ್ತು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಗೆ ಇಂದು ಉಪಚುನಾವಣೆ ನಡೆಯಿತು. ಬೆಳಗ್ಗೆಯಿಂದಲೇ ಮತದಾರರಾಗಿರುವ ಶಿಕ್ಷಕರುಗಳು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಮಧ್ಯಾಹ್ನ ವೇಳೆಗೆ ಶೇ.50ರಷ್ಟು ಮತದಾನವಾಗಿತ್ತು.
ಉಪಚುನಾವಣೆಗೆ 19,172 ಶಿಕ್ಷಕರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದು , ಪುಟ್ಟಣ್ಣ ಅವರು ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಉಪಚುನಾವಣೆ ನಡೆಸಲಾಯಿತು. 2026ರ ನವೆಂಬರ್ 11ರವರೆಗೆ ಈ ಉಪಚುನಾವಣೆಯಲ್ಲಿ ಚುನಾಯಿತರಾಗುವ ಸದಸ್ಯರಿಗೆ ಅಕಾರವಿರಲಿದೆ. 20ರಂದು ಮತ ಎಣಿಕೆ ಕಾರ್ಯ ನಡೆಲಿದ್ದು , ಪ್ರಾಶ್ಯಸ್ತ ಮತಗಳು ಆಗಿರುವುದರಿಂದ ಅಂದೇ ಫಲಿತಾಂಶ ಬರುವುದು ಅಥವಾ ಎಣಿಕೆ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ.
