ಉದುಯವಾಹಿನಿ,ದಾವಣಗೆರೆ : ಸದೃಢ ದೇಹ, ಆರೋಗ್ಯ ಸ್ವಾಸ್ಥö್ಯವನ್ನು ಬಯಸುವವರು ಸೂರ್ಯನ ಆರಾಧನೆಯನ್ನು ಮಾಡಿದರೆ ಪೂರ್ಣಫಲ ಸಿಗುವುದು ನಿಶ್ಚಿತ. ಸೂರ್ಯ ಆರೋಗ್ಯದಾಯಿ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಯೋಗಾಚಾರ್ಯ ಡಾ.ಎನ್.ಪರಶುರಾಮ್ ಹೇಳಿದರು.ನಗರದ ಬಿಐಇಟಿ ಕಾಲೇಜು ರಸ್ತೆಯಲ್ಲಿನ ಎಂಸಿಸಿ ಬಿ ಬ್ಲಾಕಿನ ಶ್ರೀಅಯ್ಯುಪ್ಪ ಸ್ವಾಮಿ ದೇವಸ್ಥಾನದಲ್ಲಿನ ಎಸ್‌ಎಎಸ್‌ಎಸ್ ಯೋಗ ಫೆಡರೇಷನ್‌ನಲ್ಲಿ ರಥ ಸಪ್ತಮಿ ಆಂಗವಾಗಿ ಆಯೋಜಿಸಲಾಗಿದ್ದ 108 ಬಾರಿ ಸೂರ್ಯ ನಮಸ್ಕಾರ, ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಸೂರ್ಯಾರಾಧನೆ ಮಾಡಿದರೆ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಮಾಹಿತಿ ನೀಡಿದರು.ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತದೆ. ಸೂರ್ಯನಿಲ್ಲದೆ ಜೀವನದ ಅಸ್ತಿತ್ವವಿರಲು ಸಾಧ್ಯವಿಲ್ಲ. ಈ ದಿನ ಯಾರು ಶ್ರದ್ಧಾ ಭಕ್ತಿಯಿಂದ 108 ಸೂರ್ಯ ನಮಸ್ಕಾರವನ್ನು ಮಾಡುತ್ತಾರೋ ಅವರಿಗೆ ಸುದೃಢ ದೇಹ, ಆರೋಗ್ಯವಂತ ಮನಸ್ಸು, ಲವಲವಿಕೆ, ತೇಜಸ್ಸು ಲಭಿಸಿ ದೀರ್ಘಾಯುಷಿಗಳಾಗಿ ಬಾಳುತ್ತಾರೆ ಎಂದು ರಥ ಸಪ್ತಮಿಯ ವಿಶೇಷತೆಯನ್ನು ತಿಳಿಸಿದರು.ಈ ವೇಳೆ ಎಂ.ಎನ್.ಅಜ್ಜಯ್ಯ, ಗೋಪಾಲಸ್ವಾಮಿ, ನಾಗರಾಜ್, ರಾಘವೇಂದ್ರ ಎಂ.ಚೌಹ್ವಾಣ್, ಬಾತಿ ಶಂಕರ್, ಜಯಮ್ಮ, ಚಂದ್ರಪ್ಪ, ಶಿವಯೋಗಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!