ಉದಯವಾಹಿನಿ, ಬೆಂಗಳೂರು: ಸಾರ್ವ ಜನಿಕರ ಆಸ್ತಿಗಳ ದಾಖಲೆಗಳ ದುರುಪಯೋಗ ವಾಗುವುದನ್ನು ತಡೆಗಟ್ಟಿ, ಮನೆಬಾಗಿಲಿಗೆ ಇ-ಖಾತಾ ದಸ್ತಾವೇಜುಗಳನ್ನು ತಲುಪಿಸ ಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ಜ್ಞಾನಭಾರತಿ ಆವರಣದಲ್ಲಿ ರಾಜರಾಜೇಶ್ವರಿ ನಗರ, ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕರ ಸಮಸ್ಯೆ ಆಲಿಸಲು ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಜನಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಖಾತೆಗಳ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ಆಸ್ತಿಗಳ ಖಾತೆ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ದುರುಪಯೋಗ ವಾಗದಂತೆ ಸರಿಪಡಿಸಲಾಗುವುದು.ಇ-ಖಾತೆ ಮಾಡಿಸುವ ಮೂಲಕ ಅದನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದರು. ಬೆಂಗಳೂರಿನಲ್ಲಿ ಸರಿಯಾಗಿ ತೆರಿಗೆ ಪಾವತಿಯಾಗಿಲ್ಲ. 2020 ರಲ್ಲಿ ಬಿಜೆಪಿ ಸರ್ಕಾರ ದುಬಾರಿ ದಂಡ ವಿಸುವ ನಿಯಮ ರೂಪಿಸಿತ್ತು. ಅದನ್ನು ಸರಿಪಡಿಸಲು ಒಂದು ಅವಗೆ ಸರಳೀಕರಣ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. ಈಗಾಗಲೇ ಸಂಪುಟದಲ್ಲಿ ಚರ್ಚಿಸಲಾಗಿದ್ದು, ವಿಧಾನಮಂಡಲದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.
ನ್ಯಾಯಯುತವಾದ ಹಾಗೂ ವೈಜ್ಞಾನಿಕವಾದ ತೆರಿಗೆ ನಿರ್ಧರಣೆಗೆ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗುವುದು. ಅಧಿಕಾರಿಗಳ ಬಳಿ ಬಂದು ಸಾರ್ವಜನಿಕರು ಸ್ವಯಂ ಘೋಷಣೆ ಮಾಡಿಕೊಂಡು ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದ್ದೇವೆ ಎಂದರು. ಸಂಸದ ಡಿ.ಕೆ.ಸುರೇಶ್ ಜನರ ಮನೆಬಾಗಿಲಿಗೆ ಹೋಗಿ ಸೇವೆ ಮಾಡುತ್ತಿದ್ದಾರೆ. ಪಂಚಾಯಿತಿ ಸದಸ್ಯರಂತೆ ರಸ್ತೆರಸ್ತೆ ಸುತ್ತಿದ್ದಾರೆ. ಇಂತಹ ಸಂಸದರನ್ನು ಹಿಂದೆಂದೂ ಜನ ನೋಡಿಲ್ಲ.

Leave a Reply

Your email address will not be published. Required fields are marked *

error: Content is protected !!