
ಉದಯವಾಹಿನಿ, ಕೋಲಾರ: ರಾಜ್ಯ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಅನುದಾನ ತರುವಲ್ಲಿ ವಿಪಲವಾಗಿರುವ ಜನಪ್ರತಿನಿದಿಗಳು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ರೈತ ಸಂಘದಿಂದ ಗಡಿಭಾಗದ ಬಂಗಾರಪೇಟೆ ತಾಲ್ಲೂಕಿನ ಕದರಿನತ್ತ ಗ್ರಾಮದಲ್ಲಿ ನಾಮದ ತಟ್ಟೆ ಬಡಿಯುತ್ತಾ ಪ್ರತಿಭಟಿಸಿ ಒತ್ತಾಯಿಸಿದರು.
ರಾಜ್ಯದ ೩೧ ಜಿಲ್ಲೆಯಲ್ಲಿ ಕೋಲಾರ ಜಿಲ್ಲೆಯನ್ನು ಭೂಪಟದಲ್ಲಿ ಎಲ್ಲಾ ಸರ್ಕಾರಗಳು ಬಜೆಟ್‌ನಲ್ಲಿ ಮರೆತು, ಅಧಿಕಾರದ ಚುಕ್ಕಾಣಿ ಹಿಡಿಯುವಾಗ ಮಾತ್ರ ಕೋಲಾರ ಜಿಲ್ಲೆಯ ಕುರುಡುಮಲೆ ಗಣಪತಿ ದೇವಸ್ಥಾನ ನೆನಪಿಗೆ ಬರುತ್ತದೆ. ಜಿಲ್ಲೆಯ ಜನತೆ ಏನು ಪಾಪ ಮಾಡಿದ್ದಾರೋ ಗೊತ್ತಿಲ್ಲ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಗೆ ರಾಜ್ಯದ ಬಜೆಟ್ ಶಾಪವಾಗಿ ಪರಿಣಮಿಸಿದೆ ಎಂದು ರೈತ ಸಂಘದ ಕೆ.ನಾರಾಯಣಗೌಡ ವಿಷಾದ ವ್ಯಕ್ತಪಡಿಸಿದರು.
ಸರ್ಕಾರದ ಮೇಲೆ ಒತ್ತಡ ಹಾಕಲು ಧೈರ್ಯವಿಲ್ಲದ ಜಿಲ್ಲೆಯ ಜನಪ್ರತಿನಿಧಿಗಳೇ ಶಾಸಕ ಸ್ಥಾನಕ್ಕೆ ಕೊಡಲೇ ರಾಜೀನಾಮೆ ನೀಡಿ ಜಿಲ್ಲೆಯ ಜನರ ಕ್ಷಮಾಪಣೆ ಕೇಳಿ ಇಲ್ಲವೇ ಕೋಲಾರ ಜಿಲ್ಲೆಯನ್ನು ಆಂಧ್ರ ಇಲ್ಲವೇ ತಮಿಳುನಾಡಿಗೆ ಸೇರಿಸಿ ಪುಣ್ಯ ಕಟಿ ಕೊಳ್ಳಿ ಎಂದು ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದರು.
ಕಾಡಾನೆಗಳ ಹಾವಳಿ, ರಸ್ತೆ, ಆಸ್ಪತ್ರೆ, ಶಾಲೆಗೆ ಅನುದಾನ ನಿರೀಕ್ಷೆಯಲ್ಲಿದ್ದ ಗಡಿಭಾಗದ ಜನರ ಆಸೆಗೆ ತಣ್ಣೀರು ಎರೆಚಿರುವ ಮುಖ್ಯಮಂತ್ರಿಗಳೇ ಜಿಲ್ಲೆಯ ರೈತರು ಬೆಳೆಯುವ ತರಕಾರಿ, ಹಾಲು ಚಿನ್ನ ಬೇಕು ಕೋಲಾರ ಜಿಲ್ಲೆಯ ಸಮಸ್ಯೆಗಳ ಅಭಿವೃದ್ದಿಗೆ ಅನುಧಾನ ಬೇಡವೇ ಎಂದು ಪ್ರಶ್ನೆ ಮಾಡಿದರು
