
ಉದಯವಾಹಿನಿ, ಆನೇಕಲ್ : ಅತ್ತಿಬೆಲೆ ಜಯಬಾರತಿ ಶಾಲಾ ಆವರಣದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಮತ್ತು ಆನೇಕಲ್ ಶಿಭಿರ ಕಚೇರಿ, ಬಮೂಲ್ ಟ್ರಸ್ಟ್ ಸಹಯೋಗದಲ್ಲಿ ಆನೇಕಲ್ ತಾಲ್ಲೂಕು ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ಸಿಬ್ಬಂದಿಗಳ ಮಕ್ಕಳಿಗೆ ೨೦೨೩-೨೪ ನೇ ಸಾಲಿನ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ೨೧೯ ವಿದ್ಯಾರ್ಥಿಗಳಿಗೆ, ಹತ್ತು ಲಕ್ಷ ರೂಪಾಯಿ ಮೌಲ್ಯದ ಚೆಕ್ ಗಳನ್ನು ಬಮೂಲ್ ನಿರ್ದೇಶಕ ಬಿ.ಜೆ.ಆಂಜಿನಪ್ಪವರು ವಿತರಣೆ ಮಾಡಿದರು.
ಈ ವೇಳೆ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಪ್ರತಿ ದಿನ ೫೦ ಸಾವಿರ ಲೀಟರ್ ಪಶು ಹಾಲು ಕಡಿಮೆಯಾಗಿದೆ ಕಾರಣ, ರೈತರು ಸಂಕಷ್ಠದಲ್ಲಿದ್ದಾರೆ ಪಶು ಆಹಾರ ದರ ಹೆಚ್ಚಾಗಿದೆ ಮತ್ತು ರಾಸುವಿನ ಸಾಕಾಣಿಕೆಯ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ರಾಸುಗಳನ್ನು ಮಾರಾಟಮಾಡುತ್ತಿದ್ದಾರೆ ಸರ್ಕಾರ ಕೂಡಲೇ ಪ್ರತಿ ಲೀಟರ್ ಹಾಲಿಗೆ ೫ ಸಾವಿರ ಪೋತ್ಸಾಹ ಧನವನ್ನು ನೇರವಾಗಿ ರೈತರಿಗೆ ನೀಡುವಂತಹ ಕೆಲಸಮಾಡಬೇಕು ಎಂದರು. ಹಾಲು ಉತ್ಪಾದಕರ ಮತ್ತು ಸಿಬ್ಬಂದಿಗಳ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕು ಎಂಬುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸುಮಾರು ೨೧೯ ವಿದ್ಯಾರ್ಥಿಗಳಿಗೆ, ಹತ್ತು ಲಕ್ಷ ರೂಪಾಯಿ ಮೌಲ್ಯದ ಚೆಕ್ ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಆನೇಕಲ್ ಶೀಥಲ ಕೇಂದ್ರದ ಉಪ ವ್ಯವಸ್ಥಾಪಕ ಹೇಮ್ಲಾ ನಾಯಕ್, ಆನೇಕಲ್ ಶಿಭಿರ ಕಚೇರಿಯ ಉಪ ವ್ಯವಸ್ಥಾಪಕರಾದ ಡಾ.ಸುರೇಶ್ ಮತ್ತು ವಿಸ್ತರಣಾದಿಕಾರಿಗಳು, ಡೈರಿ ಅಧ್ಯಕ್ಷರುಗಳು, ಮುಖ್ಯಕಾರ್ಯನಿರ್ವಾಹಕರು, ಕಾರ್ಯದರ್ಶಿಗಳು, ಹಾಲು ಉತ್ಪಾದಕರು, ವಿದ್ಯಾರ್ಥಿಗಳು ಬಾಗವಹಿಸಿದ್ದರು.
