ಉದಯವಾಹಿನಿ, ಹರಿಹರ : ತುರ್ತು ಪರಿಸ್ಥಿತಿಯಲ್ಲಿ ದಕ್ಷತೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಸಾವಿರಾರು ಜನರ ನೋವು-ತೊಂದರೆಗಳಿಗೆ ಸ್ಪಂದಿಸಿ 108 ಚಾಲಕರು ಕಾರ್ಯದಕ್ಷತೆಯಿಂದ ಸಲ್ಲಿಸಿದ ಸೇವೆ ಶ್ಲಾಘನೀಯ. ದಾವಣಗೆರೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 108 ತುರ್ತು ವಾಹನದ ಅಂತರಾಷ್ಟ್ರೀಯ ಚಾಲಕರ ದಿನಾಚರಣೆ ನಡೆಯಿತು.ರಸ್ತೆ ಅಪಘಾತ ವಿಷ ಜಂತುಗಳು ಕಚ್ಚಿರುವುದು ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯರಿಗೂ ಹಗಲು-ರಾತ್ರಿಯನ್ನದೆ ತುರ್ತು ಪರಿಸ್ಥಿತಿಯಲ್ಲಿರುವಂತ ರೋಗಿಗಳಿಗೆ ಪ್ರಾಣ ಉಳಿಸುವುದಕ್ಕೆ ಪ್ರಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿ ಸಾವುನುವಿನಲ್ಲಿ ಇರುವಂತ ಜನಗಳಿಗೆ ಆಪದ್ಬಾಂಧವರಾಗಿ ಕರೆ ಮಾಡಿದ ಕೂಡಲೇ ತಕ್ಷಣ ಸ್ಪಂದಿಸುವಂತಹ ಕಾರ್ಯವನ್ನು108 ತುರ್ತು ವಾಹನದ ಚಾಲಕರುಗಳು ಮತ್ತು ಪೈಲೆಟ್ ಗಳಿವೆ ಅಂತರಾಷ್ಟ್ರೀಯ ಚಾಲಕರು ಪೈಲೆಟ್ಗಳ ದಿನಾಚರಣೆಯ ಶುಭಾಶಯಗಳು.ಸಾವು ನೋವಿನಲ್ಲಿರುವ ಸಾರ್ವಜನಿಕರಿಗೆ ನಿರಂತರವಾಗಿ ನಿಮ್ಮ ಸೇವೆ ಇರಲಿ ಎಂದು ಸಾರ್ವಜನಿಕರು ಹಾರೈಸಿದರು ಈ ಸಂದರ್ಭದಲ್ಲಿ ಕರ್ನಾಟಕ ಆರೋಗ್ಯ ಕವಚ 108 ಅಂಬುಲೆನ್ಸ್ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ್.ವಿಜಯಕುಮಾರ್, ಅಣ್ಣಪ್ಪ. ಶರತ್. ಶಿವು. ಸುಧಾಕರ್, ಸವಿತಾ. ಸುರೇಶ್. ಮಲ್ಲಿಕಾರ್ಜುನ್. ರಾಜು.ರಾಜ್ಯ ಕಮಿಟಿಯ ಖಜಂಚಿಯಾದ ಹರೀಶ್ ಎಸ್ಎಂ. ದಾವಣಗೆರೆ ಹರಿಹರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
