ಉದಯವಾಹಿನಿ, ಆನೇಕಲ್: ಮಾಲೂರು ತಾಲ್ಲೂಕಿನ ದೊಮ್ಮಲೂರು ಗ್ರಾಮದ ನಿವಾಸಿಗಳಾದ ದಲಿತ ಕುಟುಂಬದ ಮಂಜುನಾಥ್ ಹಾಗೂ ಬಾರತಿ ರವರ ೨ ನೇ ಮಗಳಾದ ಕುಮಾರಿ ನಂದಿತಾಳನ್ನು ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಪೋಲಿಸರು ಬಂದಿಸಬೇಕು ಹಾಗೂ ನಂದಿತಾಳ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರವನ್ನು ನೀಡಬೇಕು ಮತ್ತು ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಮತ್ತು ಪ್ರಗತಿ ಪರ ಹೋರಾಟ ಸಮಿತ ಹಾಗೂ ಕರ್ನಾಟಕ ದಲಿತ ಕ್ರೈಸ್ತ ಹೋರಾಟ ಸಮಿತಿ ವತಿಯಿಂದ ಆನೇಕಲ್ ತಾಲ್ಲೂಕಿನ ಚಂದಾಪುರ ವೃತ್ತದಿಂದ ಸೂರ್ಯಸಿಟಿ ವರೆಗೆ ಪಂಜಿನ ಮೆರವಣಿಗೆ ನಡೆಸಿದರು.
ಇದೇ ಸಂಧರ್ಭದಲ್ಲಿ ಹೋರಾಟಗಾರರು ಸರ್ಕಾರಕ್ಕೆ ದಿಕ್ಕೂರಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಇನ್ನು ಹೋರಾಟದ ಸ್ಥಳಕ್ಕೆ ಸೂರ್ಯ ಸಿಟಿ ಪೋಲಿಸರು ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಇನ್ನು ಹೋರಾಟದಲ್ಲಿ ಹೋರಾಟಗಾರರಾದ ಗೂಳಿಮಂಗಲ ನಾಗಪ್ಪ. ನಾಗೇಶ್. ಜೇಮ್ಸ್. ಡೇವಿಡ್. ವಂದೇಮಾತರಂ ಮಹೇಶ್, ವಿಜಯ್ ಕುಮಾರ್. ಮತ್ತ್ಯಾಸ್. ಪದ್ಮ. ಮಾಯ. ರೋಸ್ ಲಿನ್. ರುಕ್ಕಮ್ಮ ಮತ್ತಿತರು ಹಾಜರಿದ್ದರು..
