ಉದಯವಾಹಿನಿ, ಬಂಗಾರಪೇಟೆ : ಭಕ್ತರ ಕಷ್ಟ ಕಾರ್ಪಣ್ಯಗಳ ಈಡೇರಿಸುವ ಮಾರಿಯಮ್ಮ ಮತ್ತು ನಾಗದೇವತೆ ದೇವರುಗಳ ಪ್ರತಿಷ್ಠಾಪನೆ.
ಮಾರಿಯಮ್ಮ ದೇವಿಯು ಭಕ್ತಾದಿಗಳ ಇಷ್ಟಾರ್ಥ ಸಿದ್ದಿಗೆ ಸಾಕ್ಷಿಯಾಗಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಈಡೇರಿಸುವ ಕಾಯಕಲ್ಪವಾಗಿ ನಿಂತಿದೆ. ಮಾರಿಯಮ್ಮ ದೇವಿಯ ಆರಾಧನೆಯಲ್ಲಿ ಭಕ್ತರು ದೇವಿಯ ಮೇಲಿನ ಶ್ರದ್ಧೆ ಮತ್ತು ಭಕ್ತಿ, ನಂಬಿಕೆಯಿಂದ ಪೂಜಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಮಾರಿಯಮ್ಮ ದೇವಿಯ ಪ್ರಸಾದವನ್ನು ಪಡೆಯುವುದು ಅವರ ಭಕ್ತರಿಗೆ ನಿರಾಶಾತೀತ ನಿರೀಕ್ಷೆಯ ಸ್ಥಿತಿಯನ್ನು ಕೊಡುತ್ತದೆ, ಈ ಪೂಜೆ ಮತ್ತು ಆರಾಧನೆಯ ಮೂಲಕ ಮಾರಿಯಮ್ಮ ದೇವಿ ತನ್ನ ಭಕ್ತರ ಮೇಲೆ ಅಪಾರ ದಯೆ ಮತ್ತು ಕರುಣೆಯನ್ನು ದಯಪಾಲಿಸುತ್ತಾಳೆ ಎಂಬ ನಂಬಿಕೆ ಪ್ರತೀತಿಯಲ್ಲಿದೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ.
ತಾಲೂಕಿನ ಕಾಮಸಮುದ್ರ ವ್ಯಾಪ್ತಿಯ ಬಂದರ?ಲಹಳ್ಳಿ ಗ್ರಾಮದಲ್ಲಿ ಮಾರಿಯಮ್ಮ ಮತ್ತು ನಾಗದೇವತೆ ದೇವರುಗಳ ಪ್ರತಿಷ್ಠಾಪನೆ ಮಾಡಲಾಯಿತು, ತಾಲೂಕಿನ ಗ್ರಾಮದಲ್ಲಿ ೩೦೦ ವರ್ಷಗಳ ಹಿಂದಿನ ಪ್ರಸಿದ್ಧವಾದ ದೇವಾಲಯವು ಗಿಡಘಂಟೆಗಳ ಮಧ್ಯದಲ್ಲಿ ನೆಲೆಸಿತ್ತು. ಅಂತಹ ದೇವಾಲಯವು ದೈವಿಕ ಶಕ್ತಿಯನ್ನು ಹೊಂದಿದ್ದ ಕಾರಣ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ದೇವರಿಗೆ ಒಪ್ಪಿಸುತ್ತಿದ್ದರು. ತದನಂತರದ ದಿನಗಳಲ್ಲಿ ದೈವ ಸಂಕಲ್ಪದಿಂದ ಭಕ್ತಾಧಿಗಳ ಇಷ್ಟಾರ್ಥಗಳು ಇಡೇರುತ್ತಿದ್ದವು ಆದಕಾರಣ ಇಂದು ಬೃಹದಾಕಾರವಾಗಿ ನೂತನ ದೇವಾಲಯವಾಗಿ ಬೆಳೆದು ನಿಂತಿದೆ. ಇಂದು ವೇದ ಪಾರಾಯಣ, ಮಹಾಗಣಪತಿ ಪೂಜೆ, ಕಳಶ ಸ್ಥಾಪನೆ, ನಾಡಿ ಸಂಧಾನ, ಗಣಪತಿ ಹೋಮ, ಪ್ರಧಾನ ಹೋಮ, ನವಗ್ರಹ ಹೋಮ, ಮೃತ್ಯೂಂಜಯ, ಮಹಾಲಕ್ಷಿ?ಮ ಹೋಮ, ಕಳಾ ಹೋಮ, ನಾಗದೇವತೆ ಹೋಮ, ಹಾಗೂ ವಿಶೇಷವಾಗಿ ಪೂರ್ಣ ಕುಂಬಾಭಿಷೇಕ, ಅಲಂಕಾರ, ಧೂಪ, ದೀಪ ನೈವೈದ್ಯ, ಮಂತ್ರ ಪುಷ್ಪ, ಅಷ್ಠಾವಧಾನ ಸೇವೆ, ಕುಷ್ಠಾಂಡಚೇದನ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಹಾಗೂ ರಾತ್ರಿ ತಿರುಪತಿ ಸ್ವರ್ಣಲತ ಅವರಿಂದ ಹರಿಕಥೆ ಏರ್ಪಡಿಸಲಾಗಿತ್ತು.
