ಉದಯವಾಹಿನಿ, ಬೆಂಗಳೂರು: ಪೋಲಿಸ್ ಇಲಾಖೆ ಕಳ್ಳರ ಕಾಟದಿಂದ ನಾಗರಿಕರನ್ನು ರಕ್ಷಿಸಲು ನಾನಾ ಬಗೆಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಆದರೆ ಕಳ್ಳರು ಮಾತ್ರ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ರೀತಿಯ ವೇಷದಲ್ಲಿ ಕಳ್ಳತನ ಮಾಡುತ್ತಾರೆ.
ಅಂತಹದೇ ಒಂದು ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ರಾತ್ರಿ ವೇಳೆ ನೈಟಿ ಹಾಕಿಕೊಂಡು ಕಳ್ಳನೊಬ್ಬ ಸಿಲಿಕಾನ್ ಸಿಟಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಶೂ ಮತ್ತು ಚಪ್ಪಲಿ ಕಳ್ಳತನ ಮಾಡುತ್ತಿದ್ದ ದೃಶ್ಯ
ಸಿಸಿಟಿವಿ ಸೆರೆಯಾಗಿದೆ.
ಕಣ್ಣಿಗೆ ಗುರುತು ಪತ್ತೆ ಬೀಳದಂತೆ ನೈಟಿ ಧರಿಸಿದ್ದ ಕಳ್ಳ, ಶೂ ಕದ್ದು ಕಾಂಪೌಂಡ್‌ನಿಂದ ಪರಾರಿಯಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೊರಗಿನ ಶೂ ಸ್ಟ್ಯಾಂಡ್‌ನಿಂದ ಬೆಲೆಬಾಳುವ ಶೂಗಳನ್ನು ಕಳ್ಳನು ಕದ್ದು ಪರಾರಿಯಾಗಿದ್ದಾನೆ. ಆರೋಪಿಯನ್ನು ಟ್ಯಾಗ್ ಮಾಡಿ ಆರೋಪಿಯನ್ನು ಪತ್ತೆ ಮಾಡುವಂತೆ ದೂರುದಾರರು ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.
