ಉದಯವಾಹಿನಿ,ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಚಿಕ್ಕಬಾಣವರ ಭಾರತೀಯ ಜನತಾ ಪಕ್ಷದ ಹಿರಿಯ ಮಹಿಳಾ ಮುಖ್ಯಸ್ಥೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಭಾಗ್ಯಮ್ಮ ಅವರ ನೇತೃತ್ವದಲ್ಲಿ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎಸ್ ಮುನಿರಾಜು ಅವರ ಅಮೃತ ಹಸ್ತದಿಂದ ಚಿಕ್ಕಬಾಣವರ ಪುರಸಭೆ ವ್ಯಾಪ್ತಿಯ ಮಹಿಳೆಯರಿಗೆ ವೃದ್ದಾಪ್ಯ ವೇತನ, ವಿಧವ ವೇತನ, ಸಂಧ್ಯಾ ಸುರಕ್ಷ ಯೋಜನೆ ಅಡಿಯಲ್ಲಿ ಟೈಲರಿಂಗ್ ತರಬೇತಿ ಪಡೆದವರಿಗೆ ಟೈಲರಿಂಗ್ ಪ್ರಮಾಣ ಪತ್ರ ದಾಸರಹಳ್ಳಿ ಅಭಿವೃದ್ಧಿ ಹರಿಕಾರ ಎಂದೇ ಹೆಸರಾದ ಬಿಜೆಪಿ ಮಾಜಿ ಶಾಸಕ ಎಸ್.ಮುನಿರಾಜು ಅವರು ವಿತರಿಸಿ ನಂತರ ಅವರು ಸಮಾಜದಲ್ಲಿ ಮಹಿಳೆಯರ ಪಾತ್ರ ಬಹುದೊಡ್ಡದು ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ ಸರಕಾರದ ಸವಲತ್ತು ನೇರವಾಗಿ ಅವರ ಅವರ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ ಅದರಂತೆ ಚಿಕ್ಕಬಾಣವರ ಬಿಜೆಪಿ ಹಿರಿಯ ರಾಜಕಾರಣಿ ಶ್ರೀಮತಿ ಭಾಗ್ಯಮ್ಮ ಅವರು ಮನೆ ಮನೆಗೆ ಭೇಟಿ ನೀಡಿ ನಿಮ್ಮನ್ನು ಗುರುತಿಸಿ ಟೈಲರಿಂಗ್ ತರಬೇತಿ ನೀಡಿ ಸ್ವಯಂ ಉದ್ಯೋಗಕ್ಕೆ ಮತ್ತು ತಮ್ಮ ಉಜ್ವಲ ಭವಿಷ್ಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಅವರಿಗೆ ಮುಂಬರುವ ದಿನಗಳಲ್ಲಿ ಅವರಿಗೆ ಆಶಿರ್ವಾದ ಮಾಡಿ ಇನ್ನೂ ಸಮಾಜ ಮುಖಿ ಕೆಲಸ ಮಾಡಲು ಶಕ್ತಿ ತುಂಬುವ ಕೆಲಸ ನಾವು ನೀವು ಮಾಡುವುಣಾ ಎಂದು ಮಾಜಿ ಶಾಸಕ ಎಸ್ ಮುನಿರಾಜು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.ಚಿಕ್ಕಬಾಣವಾರದ ಬಿಜೆಪಿ ಹಿರಿಯ ಮಹಿಳಾ ಮುಖ್ಯಸ್ಥೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಭಾಗ್ಯಮ್ಮ ಸರ್ವರಿಗೂ ಸ್ವಾಗತಿಸಿದರು.ಈ ಸಂದರ್ಭದಲ್ಲಿ ದಾಸರಹಳ್ಳಿ ವಾರ್ಡಿನ ಬಿಜೆಪಿ ಮುಖಂಡ ನಾಗರಾಜ್ (ನಾಗಣ್ಣ), ಮುಖಂಡರು ಮತ್ತು ಫಲಾನುಭವಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!