
ಉದಯವಾಹಿನಿ,ಚಿತ್ರದುರ್ಗ:ಪೋಕ್ಸ್ ಕಾಯ್ದೆ ಪ್ರಕರಣ ಹಿನ್ನೆಲೆ ಮುರುಘಾ ಶರಣರ ಪೀಠ ತ್ಯಾಗಕ್ಕೆ ಒತ್ತಾಯಿಸಿ ವೀರಶೈವ ಮುಖಂಡರು ಸೆಪ್ಟೆಂಬರ್ 29ರ ಗುರುವಾರ ನಗರದ ರಾಷ್ಟ್ರೀಯ ಹೆದ್ದಾರಿ 04ರಲ್ಲಿರುವ ನಿಜಲಿಂಗಪ್ಪ ಸ್ಮಾರಕ ಭವನದಲ್ಲಿ ಸಭೆ ಸೇರಿದ್ದರು ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ಸಭೆ ನಡೆದ ಸಭೆಯಲ್ಲಿಬಹುತೇಕ ಭಕ್ತರಿಂದ ಶರಣರ ಮುಂದುವರಿಕೆಗೆ ಭಾರೀ ವಿರೋಧ ವ್ಯಕ್ತವಾಯಿತು. ಅನೇಕ ಮಹಾ ಸ್ವಾಮಿಗಳಿಂದ ಮಠದ ಪರಂಪರೆ ಯಾವುದೇ ಕಳಂಕವಿಲ್ಲದೆ ನಡೆದು ಬಂದಿದ್ದು, ಆ ಪರಂಪರೆ ಉಳಿಸಲು ಕೂಡಲೇ ಶಿವಮೂರ್ತಿ ಸ್ವಾಮೀಜಿ ಅವರಿಂದ ಪೀಠ ತ್ಯಾಗವನ್ನು ಮಾಡಿಸಬೇಕು, ಎಂಬ ಒತ್ತಾಯಗಳು ಒಕ್ಕೊರಲಿನಿಂದ ಕೇಳಿ ಬಂದವು. ಇದೇ ಸಂದರ್ಭದಲ್ಲಿ ಮತ್ತೊಂದು ತಂಡ ಸ್ವಾಮೀಜಿ ಹೆಸರು ತೆಗೆಯಬಾರದು ಎಂದು ಕೆಲವು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.ಇದರಿಂದ ಸುಮಾರು ಒಂದು ಗಂಟೆಗಳ ಕಾಲ ಮಾತಿನ ವಾಗ್ವಾದ ಚಕಮಕಿ ನಡೆಯಿತು. ಕೆಲವು ಕಾಲ ಪೊಲೀಸರು ಮೂಕ ವಿಸ್ಟ್ಮಿತರಾಗಿ ನೋಡುತ್ತ ನಿಂತಿದ್ದರು ತದನಂತರ ಮಧ್ಯ ಪ್ರವೇಶಿಸಿ ಸಭೆ ಶಾಂತ ಗೊಳಿಸಿದರು.