ಉದಯವಾಹಿನಿ, ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಎರಡು ನಿರ್ಣಯಗಳನ್ನು ಅಂಗೀಕರಿಸಿದ ಸರ್ಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಇಂದು ಸದನದಲ್ಲಿ ಧರಣಿ ಮುಂದುವರೆಸಿ ನಿರ್ಣಯಗಳನ್ನು ವಾಪಸ್ ಪಡೆಯುವಂತೆ ಪಟ್ಟು ಹಿಡಿದಿದ್ದು, ಸದನದಲ್ಲಿ ಗದ್ದಲ ಕಾವೇರಿದ ವಾತಾವರಣಕ್ಕೆ ಕಾರಣವಾಗಿ ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿತು.ವಿಧಾನಸಭೆಯಲ್ಲಿ ನಿನ್ನೆ ಸಂಜೆ ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಒಂದು ನಿರ್ಣಯ ಮತ್ತು ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸುವ ಮತ್ತೊಂದು ನಿರ್ಣಯವನ್ನು ರಾಜ್ಯ ಸರ್ಕಾರ ಮಂಡನೆ ಮಾಡಿತ್ತು. ಈ ಎರಡು ನಿರ್ಣಯಗಳು ಬಿಜೆಪಿ ಸದಸ್ಯರ ವಿರೋಧ, ಧರಣಿಯ ನಡುವೆಯೇ ಸದನದಲ್ಲಿ ಅಂಗೀಕಾರಗೊಂಡಿದ್ದವು.ಇಂದು ಸಹ ಸದನದಲ್ಲಿ ನಿರ್ಣಯ ಮಂಡನೆ ಅಂಗೀಕಾರದ ಬಗ್ಗೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಜಟಾಪಟಿ ಮುಂದುವರೆದು ಈ ನಿರ್ಣಯವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ಧರಣಿಯನ್ನು ಮುಂದುವರೆಸಿದರು. ಧರಣಿ ವಾಪಸ್ ಪಡೆಯಬೇಕು ಎಂಬ ಆಡಳಿತ ಪಕ್ಷ ಹಾಗೂ ಸಭಾಧ್ಯಕ್ಷರ ಮನವಿಗೂ ಬಿಜೆಪಿ ಸದಸ್ಯರು ಓಗೊಡಲಿಲ್ಲ. ಆಗ ಸಭಾಧ್ಯಕ್ಷರು ಸದನವನ್ನು ೧೦ ನಿಮಿಷಗಳ ಕಾಲ ಮುಂದೂಡಿದರು.೧೦ ನಿಮಿಷದ ನಂತರ ಸದನ ಮತ್ತೆ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ತಮ್ಮ ಪಟ್ಟು ಸಡಿಲಿಸದೆ ಧರಣಿಯನ್ನು ಮುಂದುವರೆಸಿದರು.
ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶಾಸನ ರಚನೆ ಕಲಾಪಗಳಿವೆ ಸಹಕರಿಸಿ ಎಂದು ವಿಪಕ್ಷಗಳಿಗೆ ಮನವಿ ಮಾಡಿದರಾದರೂ ಅದಕ್ಕೆ ಸ್ಪಂದನೆ ಸಿಗಲಿಲ್ಲ.ಆಗ ಸಭಾಧ್ಯಕ್ಷರು ವರದಿಗಳನ್ನು ಒಪ್ಪಿಸುವ ಕಲಾಪ ಕೈಗೆತ್ತಿಕೊಂಡು ಅದಾದ ಬಳಿಕ ಶಾಸನ ರಚನೆಯ ಕಲಾಪಗಳನ್ನು ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆಯೇ ನಡೆಸಿದರು.ಶಾಸನ ರಚನೆ ಕಲಾಪಗಳು ಮುಗಿಯುತ್ತಿದ್ದಂತೆಯೇ ಸಭಾಧ್ಯಕ್ಷರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.
ಇಂದು ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರುಗಳೆಲ್ಲಾ ವಿಧಾನಸಭಾಧ್ಯಕ್ಷರ ಮುಂದಿನ ಬಾವಿಗೆ ಆಗಮಿಸಿ ನಿನ್ನೆಯಿಂದ ಸದನದಲ್ಲಿ ಆರಂಭಿಸಿದ್ದ ಧರಣಿಯನ್ನು ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಬಿಜೆಪಿ ಸದಸ್ಯರ ಧರಣಿ ಮಧ್ಯೆಯೇ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರ ನಿನ್ನೆ ವಿಧಾನಸಭೆಯಲ್ಲಿ ಏಕಾಏಕಿ ಕೇಂದ್ರದ ವಿರುದ್ಧ ನಿರ್ಣಯ ಮಂಡನೆ ಮಾಡಿದೆ. ಸದನ ಕಲಾಪ ಸಭೆಯಲ್ಲೂ ಚರ್ಚೆ ಮಾಡದೆ ನಿಯಮಗಳನ್ನು ಪಾಲಿಸದೆ ಈ ನಿರ್ಣಯಗಳನ್ನು ಮಂಡಿಸಿರುವುದು ಎಂದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ನಾವು ಸದನ ಸಮಿತಿ ಸಭೆಯಲ್ಲಿ ಚರ್ಚೆಯಾದಂತೆ ಮಸೂದೆಗಳ ಮಂಡನೆಗೆ ಸಹಕಾರ ಕೊಟ್ಟಿದ್ದೇವೆ. ಇಷ್ಟಾದರೂ ನಿನ್ನೆ ಕಾನೂನು ಸಚಿವರು ಕದ್ದುಮುಚ್ಚಿ ಏಕಾಏಕಿ ಕೇಂದ್ರದ ವಿರುದ್ಧ ನಿರ್ಣಯ ಮಂಡಿಸಿ ಸದನದ ನೀತಿ, ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಕೇಂದ್ರದ ವಿರುದ್ಧ ಮಾತನಾಡಲು ಹೊರಗಡೆ ಬಯಲಿದೆ, ಸಂತೆಯಿದೆ ಮಾತನಾಡಲಿ. ಸದನಕ್ಕೆ ಘನತೆ, ಗಾಂಭೀರ್ಯ ಇದೆ. ಇಲ್ಲಿ ಈ ರೀತಿ ನಿರ್ಣಯ ಮಂಡನೆ ಮಾಡಿರುವುದು ಸರಿಯಲ್ಲ. ಕಾನೂನು, ಸಂವಿಧಾನ, ನಿಯಮಾವಳಿ ಎಲ್ಲವನ್ನು ಉಲ್ಲಂಘಿಸಿ ನಿರ್ಣಯಗಳನ್ನು ಮಂಡಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.ಸರ್ಕಾರದ ಪರವಾಗಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ನಿರ್ಣಯ ರಾಜ್ಯದ ಹಿತರಕ್ಷಿಸುವ ನಿರ್ಣಯ ಆಗಿದೆ.

Leave a Reply

Your email address will not be published. Required fields are marked *

error: Content is protected !!