ಉದಯವಾಹಿನಿ, ಹಗರಿಬೊಮ್ಮನಹಳ್ಳಿ: ಪದವಿ ಪರೀಕ್ಷೆ ಶುಲ್ಕ ಕಡಿಮೆ ಮಾಡುವಂತೆ ಹಾಗೂ ಪರೀಕ್ಷೆಗಳ ದಿನಾಂಕ ಮುಂದೂಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪಟ್ಟಣದ ಜಿವಿವಿಪಿ ಪ್ರಥಮ ದರ್ಜೆ ಕಾಲೇಜ್ ನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು
ಸಂಘಟನೆಯ ಜಿಲ್ಲಾ ಅಧ್ಯಕ್ಷ ದೊಡ್ಡಬಸವರಾಜ ಮಾತನಾಡಿ ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ,ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ತುಂಬಾ ವಿರಳ ಇರುವ ಕಾರಣ ಈ ಭಾಗದ ಜನರ ಆರ್ಥಿಕವಾಗಿ ತುಂಬಾ ಬಡವರು ಹಾಗೂ ಕಡುಬಡವರು ಇರುತ್ತಾರೆ ಬಡತನದಿಂದ ಅನೇಕ ವಿದ್ಯಾರ್ಥಿಗಳು ಪದವಿ ಕೋರ್ಸ್‌ನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರು, ಮಂಗಳೂರಿನಂತಹ ನಗರಕ್ಕೆ ದುಡಿಯಲು ಹೋದ ಉದಾಹರಣೆ ಸಾಕಷ್ಟು ಇವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬರಗಾಲದ ಸಮಯದಲ್ಲಿ ಮನೆಯಲ್ಲಿ ಹಣ ಕೊಡದಿದ್ದರೂ ಓದುಬೇಕೆಂಬ ಹಂಬಲದಿಂದಾಗಿ ವಿದ್ಯಾರ್ಥಿಗಳಾದ ನಾವುಗಳು ಪದವಿ ದಾಖಲಾತಿ ಮಾಡಿಸಿದ್ದವೆ. ಆದರೆ ಕಳೆದ ಎರಡು ವರ್ಷದ ಹಿಂದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 150 ರೂಪಾಯಿ ಮತ್ತು 250 ರೂಪಾಯಿ ಮಾತ್ರ ಇದ್ದ ಪರೀಕ್ಷೆ ಶುಲ್ಕ ಎರಡು ವರ್ಷದಲ್ಲಿ ದಿಡೀರನೆ 12,00 ರೂ. ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ ಪರೀಕ್ಷೆ ಶುಲ್ಕ ಹಣ ಹೆಚ್ಚಳ ಮಾಡಿರವುದನ್ನು ಕೂಡಲೇ ವಾಪಾಸು ಪಡೆದು ನೇರವಾಗಿ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆಯಿಂದ ಬರಿಸಿಕೊಳ್ಳಬೇಕು ಎಂದರು. ತಾಲೂಕು ಅಧ್ಯಕ್ಷ ಜಯಸೂರ್ಯ ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ಎಷ್ಟು ಶುಲ್ಕ ಇತ್ತು ಅಷ್ಟು ಮಾತ್ರ ತೆಗೆದುಕೊಳ್ಳಬೇಕು. ಎಂದು ವಿದ್ಯಾರ್ಥಿಗಳ ಪರವಾಗಿ ಒತ್ತಾಯಿಸಿದರು , ಹಳೆಯ ಶುಲ್ಕವನ್ನು ಮುಂದುವರಿಸದೇ ಇದ್ದ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕುವ ಸಂದರ್ಭವನ್ನು ಸೃಷ್ಟಿಸಬಾರದೆಂದು ಈ ಮೂಲಕ ಒತ್ತಾಯಿಸಿದರು
ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳಾದ ಶಿವರೆಡ್ಡಿ ತಾಲೂಕು ಸದಸ್ಯರಾದ ಹುಲುಗಪ್ಪ ಮಾರುತಿ ಮಂಜು ಬಿಂದು ಅರುಣ ನಿಸರ್ಗ ಗಂಗಮ್ಮ ಕವಿತ ರಾಜೀವ ಉದಯ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
