ಉದಯವಾಹಿನಿ, ಆನೇಕಲ್: ಇತಿಹಾಸ ಪ್ರಸಿದ್ದ ದೇವಾಲಯವಾದ ಹೆನ್ನಾಗರ ಶ್ರೀ ಯಲ್ಲಮ್ಮ ದೇವಸ್ಥಾನದ ಜೀಣೋದ್ದಾರದ ಭೂಮಿ ಪೂಜಾ ಕಾರ್ಯಕ್ರಮ ಭಕ್ತರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತೋಸ್ತವಾಗಿ ನೆರವೇರಿತು.
ವಿಶೇಷವಾಗಿ ಪವಾಡ ಪುರುಷ ಎಂದು ಹೆಸರು ವಾಸಿಯಾಗಿದ್ದ ಗದ್ದಿಗೆ ಜ್ಯೋತಿಲಿಂಗ ಸ್ವಾಮಿಗಳ ಜೀವ ಸಮಾದಿ ಕೂಡ ಈ ಜಾಗದಲ್ಲಿದೆ, ಜೊತೆಗೆ ನೂರಾರು ಕುಟುಂಬಗಳಿಗೆ ಹೆನ್ನಾಗರ ಶ್ರೀ ಯಲ್ಲಮ್ಮ ದೇವಾಲಯವು ಮನೆ ದೇವರು ಕೂಡ ಆಗಿದ್ದು, ಕಷ್ಠ ಎಂದು ದೇವಾಲಯಕ್ಕೆ ಬಂದ ಭಕ್ತರಿಗೆ ಯಲ್ಲಮ್ಮ ದೇವಿಯು ಸಮಸ್ಯೆಗಳನ್ನು ಬಗೆಹರಿಸಿರುವ ಎಷ್ಠೋ ಉದಾಹರಣೆಗಳು ಇಂದಿಗೂ ಜೀವಂತವಾಗಿದ್ದು, ಹಾಗೆಯೇ ೧೯೭೫-೭೬ ರಲ್ಲಿ ಮೈಸೂರು ಮಹಾರಾಜರಾದ ಜಯ ಚಾಮರಾಜೇಂದ್ರ ಒಡೆಯರ್ ರವರೇ ಯಲ್ಲಮ್ಮ ದೇವಿ ಮಹತ್ವ ಮತ್ತು ಗದ್ದಿಗೆ ಜ್ಯೋತಿಲಿಂಗ ಸ್ವಾಮಿಗಳ ಪವಾಡವನ್ನು ಮೆಚ್ಚಿ ಜಾತ್ರೆಗೆ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದರು. ಇಂತಹ ಹತ್ತು ಹಲವು ವಿಶಿಷ್ಠ, ಶಕ್ತಿ ಹೊಂದಿರುವ ಈ ಪುಣ್ಯದ ಸ್ಥಳದಲ್ಲಿ ಇಂದು ದೇವಸ್ಥಾನದ ಜೀಣೋದ್ದಾರದ ಭೂಮಿ ಪೂಜಾ ಕಾರ್ಯಕ್ರಮ ಭಕ್ತರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತೋಸ್ತವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಗುಮ್ಮಳಾಪುರ ಮಠದ ಪಟ್ಟದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಗಳು, ವೇಮನ ಮಹಾ ಪೀಠದ ಶ್ರೀ ವೇಮಾನಂದ ಮಹಾಸ್ವಾಮಿಗಳು, ಬೆಳ್ಳಾವಿ ಮಠದ ಮಹಂತ ಶಿವಾಚಾರ್ಯ ಮಹಾಸ್ವಾಮಿಗಳು, ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್. ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷರಾದ ಆರ್.ಕೆ. ಕೇಶವರೆಡ್ಡಿ. ಮುನಿರತ್ನಮ್ಮ ಮುನಿರಾಜು, ಶ್ರೀ ಯಲ್ಲಮ್ಮ ದೇವಿ ಮತ್ತು ಗದ್ದಿಗೆ ಜ್ಯೋತಿ ಲಿಂಗಸ್ವಾಮಿಗಳ ಟ್ರಸ್ಟ್ ನ ಅಧ್ಯಕ್ಷ ಸುರೇಶ್ ರೆಡ್ಡಿ, ಹೊಸಹಳ್ಳಿ ರಮೇಶ್, ಪ್ರಬಾಕರ್ ರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಹಾರಗದ್ದೆ ವೆಂಕಟೇಶ್, ನಾಗೇಶ್, ನಾಗರಾಜ್, ಧರ್ಮವೀರ್, ಬಸಣ್ಣ, ಅಕ್ಷಯ್, ಸಿದ್ದೇಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಟ್ರಸ್ಟ್ ಪದಾದಿಕಾರಿಗಳು ಮತ್ತು ದೇವಾಲಯದ ವಶಂಸ್ಥರು ಮತ್ತು ಭಕ್ತರು ಬಾಗವಹಿಸಿದ್ದರು.
