
ಉದಯವಾಹಿನಿ, ಚಿಟಗುಪ್ಪ: ಅಗ್ನಿ ಅನಾಹುತಗಳು ಸಂಭವಿಸಿದಾಗ ನಿಖರವಾದ ಮಾಹಿತಿ ಕೊರತೆಯಿಂದಾಗಿ ಬಹಳಷ್ಟು ಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಸರುಬಾಯಿ ಆರ್.ಪವಾರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶುಕ್ರವಾರ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಚಿಟಗುಪ್ಪ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಗ್ನಿ ಶಾಮಕ ಸೇವಾ ದಿನವನ್ನು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬೆಂಕಿ ದುರಂತ ಸಂಭವಿಸಿದಾಗ ಅಗ್ನಿ ಶಾಮಕ ಠಾಣೆಗೆ ಕರೆ ಮಾಡುವರು ಘಟನೆ ಸಂಭವಿಸಿರುವ ಸ್ಥಳ, ಅಲ್ಲಿಗೆ ಬರಬೇಕಾದ ಮಾರ್ಗ ಕುರಿತು ಸರಿಯಾದ ಮಾಹಿತಿ ನೀಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನ ತಲುಪುವುದು ತಡವಾಗುತ್ತದೆ. ದುರಂತದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದರು. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ನಾರಂದ ಸೋನಕೇರಾ ಮಾತನಾಡಿ, ದುರಂತದ ಬಗ್ಗೆ ಸರಿಯಾದ ಮಾಹಿತಿ ನೀಡುವುದರ ಜತೆಗೆ ಬೆಂಕಿ ನಂದಿಸುವ ಪ್ರಾಥಮಿಕ ಹಂತದ ಪ್ರಯತ್ನಗಳನ್ನು ಕೆ?ಗೊಳ್ಳುವುದರಿಂದ ಪ್ರಾಣ, ಆಸ್ತಿ ಹಾನಿಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ನಂತರ ಅಗ್ನಿಶಾಮಕ ಸಿಬ್ಬಂದಿ ರವಿ ಕನಕಟಕ್ಕರ್ ಮಾತನಾಡಿ ತೈಲ ಬೆಂಕಿ, ಗ್ಯಾಸ್ ಫೈರ್, ಎಲೆಕ್ಟ್ರಿಕಲ್ ಮತ್ತು ಮೆಟಲ್ ಫೈರ್ 4 ವಿಧದ ಬೆಂಕಿಯನ್ನು ಬೆಂಕಿಯ ತೀವ್ರತೆಯನ್ನು ಆಧರಿಸಿ ನಂದಿಸಬೇಕು. ನೀರಿನಿಂದ ತಣಿಸುವಿಕೆ, ಬೇರ್ಪಡಿಸುವಿಕೆ, ಮುಚ್ಚುವಿಕೆ. ಬೆಂಕಿಯನ್ನು ನಂದಿಸುವ ವಿಧಾನಗಳು. ಯಾವ ಬಗೆಯ ಬೆಂಕಿಗೆ ಯಾವುದನ್ನು ಬಳಸಬೇಕು ಎಂಬ ಮಾಹಿತಿ ಅಗತ್ಯ ಎಂದು ಮಾಹಿತಿ ನೀಡಿದರು. ಪತ್ರಕರ್ತ ರಾಜಕುಮಾರ ಆರ್. ಹಡಪದ ಮಾತನಾಡಿ ಅಗ್ನಿಶಾಮಕ ದಳದ ಸೇವೆ ಶ್ಲಾಘನೀಯವಾದದ್ದು ಅವರು ಹಗಲು ರಾತ್ರಿ ಎನ್ನದೆ ದಿನದ24 ಘಂಟೆ ಸಾರ್ವಜನಿಕರ ಸೇವೆಯಲ್ಲಿ ಇರುತ್ತಾರೆ ಅವರು ಕೇವಲ ಬೆಂಕಿಯನ್ನು ನಂದಿಸುವುದು ಅಷ್ಟೇ ಅಲ್ಲದೇ ತುರ್ತು ಪರಿಸ್ಥಿತಿಯ ಸೇವೆಯನ್ನು ಕೂಡ ಮಾಡುತ್ತಾರೆ ಇತ್ತೀಚೆಗೆ ಮುದನ್ನಾಳ ಗ್ರಾಮದಲ್ಲಿ ಜಿಂಕೆಯನ್ನು ಬಾವಿಯಲ್ಲಿ ಬಿದಿರುವುದನ್ನು ತೆಗೆದು ಪ್ರಾಣವನ್ನು ಉಳಿಸಿದ್ದಾರೆ, ಅವರ ಪ್ರಾಣವನ್ನು ಬದಿಗಿಟ್ಟು ಸಾರ್ವಜನಿಕ, ಪ್ರಾಣಿಗಳ ಪ್ರಾಣ ಉಳಿಸುವ ಪ್ರಯತ್ನ ಮಾಡುತ್ತಾರೆ ಎಂದರು. ಅರುಣಕುಮಾರ ಮಾತನಾಡಿ ಮನೆಗಳಲ್ಲಿ ಬೆಂಕಿ ಹೊತ್ತಿಕೊಂಡರೆ, ಗ್ಯಾಸ್ ಹೊತ್ತಿಕೊಂಡರೆ ಏನು ಮಾಡಬೇಕು. ವಾಹನ ಅಪಘಾತವಾದಾಗ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು. ಇಂತಹ ಸಂಧರ್ಭಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
