ಉದಯವಾಹಿನಿ, ಬೀದರ: ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷಸ್ಥಾನ ಮಹಿಸಿದ ಶಾಲೆಯ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಉಜ್ವಲಾ ಶಿರಮಾ ಅವರು ಮಾತನಾಡುತ್ತ ಸರ್. ಸಿ.ವಿ. ರಾಮನ್ ಅವರು ಬೆಳಕಿನ ಚದುರುವಿಕೆಯು ಪ್ರಯೋಗದ ಮೂಲಕ ತಿಳಿಸಿ ವಿದ್ಯಾರ್ಥಿಗಳಿಗೆ ಅಮೂಲ್ಯವಾದಂತ ಕೊಡುಗೆಯನ್ನು ನೀಡಿದ್ದಾರೆ. ಈ ಬೆಳಕಿನ ಚದುರುವಿಕೆಯನ್ನು ರಾಮನ್ ಎಫೆಕ್ಟ್ ಎಂದು ಕರೆಯುತ್ತಾರೆ. ಈ ಸಾಧನೆಗೆ ಅವರಿಗೆ ಸಂದ ಪ್ರಶಸ್ತಿ ನೋಬಲ್ ಪ್ರಶಸ್ತಿ ನೀಡಲಾಯಿತು ಎಂದು ಹೇಳಿದರು.
ಕಾರ್ಯಕ್ರಮ ವಕ್ತಾರರಾಗಿರುವ 9ನೇ ತರಗತಿಯ ಭಗಿನಿ ಬಸವಾಂಜಲಿ ಮತ್ತು 8ನೇ ವರ್ಗದ ಕೇದಾರ ಮಾತನಾಡುತ್ತ ಪ್ರತಿ ವರ್ಷದಂತೆ ಈ ವರ್ಷವೂ ಇಡಿ ದೇಶಾದ್ಯಂತ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸುತ್ತೇವೆ. ಭಾರತದ ಹೆಮ್ಮೆಯ ವಿಜ್ಞಾನಿ, ವೈಜ್ಞಾನಿಕ ಲೋಕದಲೆಲ್ಲ ಭಾರತವನ್ನು ಒಂದು ಶಕ್ತಿಯುತವಾಗಿ ಮಾಡಿದ ವ್ಯಕ್ತಿ. ಆ ಕಾಲದಲ್ಲಿ ಎಲ್ಲರನ್ನು ಆಶ್ಚರ್ಯ ಪಡುವಂತೆ ಮಾಡಿದ ವ್ಯಕ್ತಿ. ವಿವಿಧ ಪರಿಶೋಧನೆಗಳಿಗೆ ಹೆಸರಾದ ಮಹಾನ್ ಶೋಧಕ ಸರ್. ಸಿ.ವಿ. ರಾಮನ್. ಹಡಗು ಸಮುದ್ರದಲ್ಲಿ ಚಲಿಸುತ್ತಿರುವಾಗ ಸಮುದ್ರದ ನೀರು ನೀಲಿ ಏಕೆ ಎಂದು ಪ್ರಶ್ನಿಸಿದರು ಅದಕ್ಕೆ ಬೆಳಕಿನ ಚದುರುವಿಕೆಯೇ ಕಾರಣ ಎಂದು ಹೇಳಿದರು.
ವೇದಿಕೆಯ ಮೇಲೆ ಬಾಲಾಜಿ ರಾಠೋಡ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಪರಿಚಯ ಶೃಷ್ಟಿ ಪ್ರಭುಶೆಟ್ಟಿ ಮಾಡಿದರೆ ವ್ಯಯಕ್ತಿಯ ಗೀತೆ ದೀಪಿಕಾ ಮತ್ತು ನಿಕಿತಾ ಹಾಡಿದರು. ಪ್ರತಿಭಾ ವಂದಿಸಿದರೆ ಸಾಂಚಿ ಕಾರ್ಯಕ್ರವನ್ನು ನಿರೂಪಿಸಿದಳು. ಕೊನೆಗೆ ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾ ವಿಧಿ ಸಾಮೂಹಿಕವಾಗಿ ಮಕ್ಕಳಿಂದ ಹೇಳಿಸಲಾಯಿತು.
