ಉದಯವಾಹಿನಿ, ಚಿತ್ರದುರ್ಗ:  ಆರೋಗ್ಯ ಸಮಸ್ಯೆ ಪರಿಹರಿಸುವಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಸದಸ್ಯರ ಪಾತ್ರ ಮಹತ್ವವಾದದು ಎಂದು ಯಳಗೋಡು ವೈದ್ಯಾಧಿಕಾರಿ ಡಾ.ಸುಷ್ಮಿತಾ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಯಳಗೋಡು ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಶ್ವಾಸ್ ಆಂದೋಲನ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಾರ್ವಜನಿಕ ಆರೋಗ್ಯ, ಸಾಂಕ್ರಾಮಿಕ ರೋಗ ನಿಯಂತ್ರಣ, ತಾಯಿ ಮಕ್ಕಳ ಆರೋಗ್ಯ ಸಮಸ್ಯೆ, ಕ್ಷಯರೋಗ ನಿಯಂತ್ರಣ, ಜೀವನಶೈಲಿ ರೋಗಗಳ ನಿಯಂತ್ರಣ ಕಾಪಾಡುವಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಹಾಗೂ ಪೌಷ್ಟಿಕ ಸಮಿತಿಗಳ ಪಾತ್ರ ಮುಖ್ಯವಾಗಿದೆ. ಸಮಿತಿ ಸದಸ್ಯರು ದಿನಾಂಕ 03-03-2024 ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಹಕರಿಸಬೇಕು. ಯಳಗೋಡಿನ ವ್ಯಾಪ್ತಿಯಲ್ಲಿ ಮತ್ತು ಮುದ್ದಾಪುರ ವ್ಯಾಪ್ತಿಯಲ್ಲಿ ಬರುವ ಒಟ್ಟು 39 ಹಳ್ಳಿಗಳಲ್ಲಿಯೂ ಸಹ ಗ್ರಾಮ ಆರೋಗ್ಯ ಸಭೆ ನಡೆಸಿ ಸ್ಥಳೀಯ ಶಾಲೆಗಳಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಜಾಥ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

 

Leave a Reply

Your email address will not be published. Required fields are marked *

error: Content is protected !!