
ಉದಯವಾಹಿನಿ,ದೇವದುರ್ಗ: ತಾಲೂಕಿನ ಅರಕೇರಾ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಕಂದಾಯ ಸಚಿವ ಆರ್.ಅಶೋಕ್ ದಲಿತರ ಮನೆಯಲ್ಲಿ ಉಪಹಾರ ಸೇವನೆ ಮಾಡಿದರು.ಗ್ರಾಮದ ನಿವಾಸಿ ದೇವಣ್ಣ ಬೇರಿ ಮತ್ತು ಬಸಲಿಂಗಮ್ಮ ದಂಪತಿಗಳ ಮನೆಯಲ್ಲಿ ಬಿಸಿ ಜೋಳದ ರೊಟ್ಟಿ ಜೊತೆ ಒಗ್ಗರಣೆ,ಬಜ್ಜೆ ಸೇವಿಸಿದರು.ಬಳಿಕ ಚಹಾ ಕುಡಿದು ಕೆಲಕಾಲ ಮನೆಯವರ ಜೊತೆ ಕುಶಲೋಪರಿ ವಿಚಾರಿಸಿದರು. ಶಾಸಕ ಕೆ.ಶಿವನಗೌಡ ನಾಯಕ ಹಾಗೂ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ ಸಹ ಉಪಹಾರ ಸೇವನೆ ಮಾಡಿದರು.