
ಉದಯವಾಹಿನಿ,ಪೀಣ್ಯ ದಾಸರಹಳ್ಳಿ : ಸಮೀಪದ ವಿದ್ಯಾಮಾನ ನಗರ ಮತ್ತು ದೊಡ್ಡಬಿದರಕಲ್ಲ್ ವಾರ್ಡಿನ ವ್ಯಾಪ್ತಿಗೆ ಬರುವ ತಿಗಳರಪಾಳ್ಯ ಮತ್ತು ಅಂದ್ರಹಳ್ಳಿ ಭಾಗದಲ್ಲಿ ಒಳಚರಂಡಿ(ಡ್ರೈನೇಜ್) ಹಾಗೂ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಯಸವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೊಡ್ಡಬಿದರಿಕಲ್ಲ್ ಮತ್ತು ವಿದ್ಯಾ ಮಾನ ನಗರ ವಾರ್ಡಿನ ಬಿಜೆಪಿ ಮುಖಂಡ ಸತೀಶ್ ಹೊಸಹಳ್ಳಿ, ಬಿಜೆಪಿ ಯುವ ಮೋರ್ಚಾ ಮುಖಂಡ ಅರುಣ್ ಭೈಲಪ್ಪ,ವಿಜಯ ಕುಮಾರ್, ಶೇಶಾಂತ್,ನಂಜುಂಡಪ್ಪ,ಶಿವಕುಮಾರ್, ಮಂಜುನಾಥ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಸಮಸ್ತ ನಾಗರಿಕರು ಮುಂತಾದವರು ಇದ್ದರು.